NIA RAID | ಕೇರಳದ 50 ಕಡೆಗಳಲ್ಲಿ ಬಲೆ: 13 ಮಂದಿ ಮುಖಂಡರುಗಳು ವಶಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ, ಕರ್ಣಾಟಕ, ತಮಿಳುನಾಡು, ದೆಹಲಿ ಸಹಿತ ದೇಶದ ಹಲವೆಡೆಗಳಲ್ಲಿ ಏಕಕಾಲಕ್ಕೆ ಇಂದು ಬಲೆ ಬೀಇಸಿರುವ ಎನ್‌ಐಎ ಟೀಮ್, ಕೇರಳ ರಾಜ್ಯವೊಂದರಲ್ಲಿಯೇ ಬರೋಬ್ಬರಿ 50 ಕಡೆಗಳಲ್ಲಿ ದಾಳಿ ನಡೆಸಿ ಮಾಹಿತಿ ಸಂಗ್ರಹಿಸುತ್ತಿದೆ.
ಮೂಲಗಳ ಪ್ರಕಾರ ದಾಳಿಯ ಸಂದರ್ಭ 13 ಮಂದಿ ಮುಖಂಡರುಗಳನ್ನು ಎನ್‌ಐಎ ವಶಕ್ಕೆ ತೆಗೆದುಕೊಂಡಿದೆ. ಇಂದು ನಸುಕಿನ ಮೂರು ಗಂಟೆಯ ವೇಳೆಗೆ ಎನ್‌ಐಎ ದಿಢೀರ್ ದಾಳಿ ನಡೆಸಿದ್ದು, ನಿದ್ದೆಯ ಮಂಪರಿನಲ್ಲಿದ್ದವರಿಗೆ ಭರ್ಜರಿ ಶಾಕ್ ನೀಡಿತ್ತು. ಅಚ್ಚರಿಯೆಂದರೆ ಈ ದಾಳಿಯ ಮಾಹಿತಿ ಕೇರಳ ಪೊಲೀಸರಿಗೂ ಎನ್‌ಐಎ ನೀಡಿರಲಿಲ್ಲ. ಇತ್ತೀಚೆಗೆ ನಡೆದ ಹಲವು ಸಂಘ ಪರಿವಾರ ಕಾರ್ಯಕರ್ತರ ಕೊಲೆ ಪ್ರಕರಣಗಳಲ್ಲಿ ಪಿಎ-ಐ ಹೆಸರು ದಟ್ಟವಾಗಿ ಕೇಳಿ ಬಂದಿರುವುದು, ಪಿಎ-ಐನ ಖಾತೆಗಳಿಗೆ ವಿದೇಶಗಳಿಂದ ಹೇರಳ ಹಣ ಹರಿದು ಬಂದಿರುವುದು ಇವೆಲ್ಲವುಗಳ ಬಗ್ಗೆಯೂ ತೀವ್ರ ತನಿಖೆ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!