ಬರೋಬ್ಬರಿ 190 ಕಿಲೋ ಮೀಟರ್ ರೈಲಿನ ಇಂಜಿನ್ ಕೆಳಗೆ ಕುಳಿತು ಪ್ರಯಾಣಿಸಿದ ಭೂಪ!

ಹೊಸದಿಗಂತ ದಿಜಿಟಲ್‌ ಡೆಸ್ಕ್‌

ಭಾರತೀಯ ರೈಲು ಲಕ್ಷಾಂತರ ಜನರ ಜೀವನಾಡಿ. ಇಲ್ಲಿ ಜನರು ವಿವಿಧ ಪ್ರದೇಶಗಳಿಗೆ ಪ್ರಯಾಣ ಬೆಳೆಸುತ್ತಾರೆ. ಬಹುತೇಕ ಎಲ್ಲ ರೈಲಿನ ಬೋಗಿಗಳು ತುಂಬಿ ತುಳುಕುತ್ತಿರುತ್ತವೆ. ಜನರು ಬ್ಯಾಗ್​​ ಇಡುವ ಸ್ಥಳಗಳಲ್ಲೂ ಹತ್ತಿ ಪ್ರಯಾಣಿಸುತ್ತಾರೆ. ಆದರೆ, ಇಲ್ಲೋರ್ವ ವ್ಯಕ್ತಿ ಸುಮಾರು 190 ಕಿಲೋ ಮೀಟರ್ ದೂರವನ್ನು​​ ರೈಲಿನ ಇಂಜಿನ್ ಕೆಳಗೆ ಕುಳಿತು ಪ್ರಯಾಣಿಸಿದ್ದಾನೆ.
ಹೌದು, ಬಿಹಾರದ ರಾಜ್​​ಗಿರ್​​​ನಿಂದ ಗಯಾದವರೆಗೆ ವ್ಯಕ್ತಿ ಇಂಜಿನ್ ಕೆಳಗೆ ಕುಳಿತು ಪ್ರಯಾಣ ಬೆಳೆಸಿದ್ದಾನೆಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವ್ಯಕ್ತಿ ಪ್ರಯಾಣ ಬೆಳೆಸುತ್ತಿರುವುದನ್ನ ರೈಲಿನ ಚಾಲಕ ನೋಡಿ, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಆತನನ್ನು ಬಂಧಿಸಿರುವ ಸಿಬ್ಬಂದಿ ಬಳಿಕ ಸರಿಯಾದ ಮಾಹಿತಿ ಇಲ್ಲದ ಕಾರಣ ಬಿಟ್ಟು ಕಳುಹಿಸಿದ್ದಾರೆಂದು ಹೇಳಲಾಗ್ತಿದೆ.
ರೈಲ್ವೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಬುದ್ಧ ಪೂರ್ಣಿಮಾ ಎಕ್ಸ್​​ಪ್ರೆಸ್​​ನಲ್ಲಿ ಸೋಮವಾರ ಮುಂಜಾನೆ 4ಗಂಟೆಗೆ ರಾಜ್​ಗಿರ್​ನಿಂದ ಪಾಟ್ನಾ ಮೂಲಕ ಗಯಾಕ್ಕೆ ತೆರಳಿದ್ದಾನೆ. ರೈಲು ಗಯಾ ಪ್ಲಾಟ್​ಫಾರ್ಮ್​​ಗೆ ಬರುತ್ತಿದ್ದಂತೆ ಇಂಜಿನ್​ ಕೆಳಗಿನಿಂದ ಶಬ್ದ ಬಂದಿದೆ. ಈ ವೇಳೆ ಪರಿಶೀಲನೆ ನಡೆಸಿದಾಗ ವ್ಯಕ್ತಿ ಇರುವುದು ಕಂಡು ಬಂದಿದೆ ಎಂದಿದ್ದಾರೆ. ಆ ಜಾಗಕ್ಕೆ ಪ್ರವೇಶ ಪಡೆದುಕೊಳ್ಳುವುದು ಅಸಾಧ್ಯ. ಆದರೆ, ವ್ಯಕ್ತಿ ಕುಳಿತುಕೊಂಡಿರುವುದು ನಮಗೂ ಆಶ್ಚರ್ಯ ಮೂಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!