ಕೊಡಗಿಗೆ ಮತ್ತೆ ಶಾಕ್: ನಡುಗಿದ ಭೂಮಿ, ಕುಸಿದ ಭೂಭಾಗ, ಹರಿದುಬಂದ ಕೆಸರು ನೀರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರೀ ಮಳೆ, ಜಲಸ್ಪೋಟಗಳ ಬೆನ್ನಿಗೇ ಕೊಡಗು ಜಿಲ್ಲೆಯ ಮದೆನಾಡು ಭಾಗದಲ್ಲಿ ಭಾರೀ ಸದ್ದಿನೊಂದಿಗೆ ಭೂಕುಸಿತ ಸಂಭವಿಸಿ, ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಇಂದು ಬೆಳಗ್ಗೆ ಇದೇ ಭಾಗದಲ್ಲಿ ಕಂಪನದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಬೆಟ್ಟದ ತಪ್ಪಲಿನ 18 ಕುಟುಂಬಗಳನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ.

ಎಲ್ಲೆಲ್ಲಿ ಆತಂಕ?

ಸ್ಥಳೀಯರ ಮಾಹಿತಿ ಪ್ರಕಾರ ರಾಷ್ಟ್ರೀಯ ಹೆದ್ದಾರಿ 275ರ ಬಳಿಯ ಮದೆನಾಡು, ಜೋಡುಪಾಲ, ಮೊಣ್ಣಗೇರಿ ಭಾಗದಲ್ಲಿ ಬೆಳಗ್ಗೆ ಕಂಪನದ ಸ್ಪಷ್ಟ ಅನುಭವವಾಗಿದೆ. ಜೊತೆಗೆ ಭೂ ಕುಸಿತವಾಗಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ. ಭಾರೀ ಸದ್ದಿನ ಬೆನ್ನಿಗೇ ಜೋಡುಪಾಲದವರೆಗೆ ಕೆಸರು ಮಿಶ್ರಿತ ನೀರು ಕೂಡಾ ಹರಿದುಬಂದಿದೆ ಬಂದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದ್ದು, ಇಲಾಖೆಗಳ ಅಧಿಕೃತ ವರದಿ ನಿರೀಕ್ಷಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!