ತ್ರಿವೇಣಿ ಸಂಗಮದ ನೀರು ಸ್ನಾನ, ಕುಡಿಯಲು ಯೋಗ್ಯ: ಆರೋಪಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ಉತ್ತರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಯಾಗರಾಜ್​ನ ಮಹಾಕುಂಭ ಮೇಳದಲ್ಲಿ ಅನೇಕ ಸ್ಥಳಗಳಲ್ಲಿ ನೀರಿನಲ್ಲಿ ಮಲ ಬ್ಯಾಕ್ಟೀರಿಯಾಗಳಿವೆ. ಈ ನೀರು ಸ್ನಾನಕ್ಕೆ ಯೋಗ್ಯವಾಗಿಲ್ಲ ಎಂಬ ವರದಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರಾಕರಿಸಿದ್ದಾರೆ.

ಸಂಗಮದ ನೀರು ಸ್ನಾನ ಮಾಡಲು ಮಾತ್ರವಲ್ಲ ಕುಡಿಯಲು ಕೂಡ ಯೋಗ್ಯವಾಗಿದೆ. ತ್ರಿವೇಣಿ ಸಂಗಮದಲ್ಲಿನ ನೀರು ಪೌರಾಣಿಕ ಸರಸ್ವತಿಯೊಂದಿಗೆ ಗಂಗಾ ಹಾಗೂ ಯಮುನಾ ನದಿ ಸೇರುವ ಸ್ಥಳ. ಇದು ಕುಡಿಯಲು ಕೂಡ ಯೋಗ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಯಾಗರಾಜ್‌ನಲ್ಲಿ ಗಂಗಾ ಮತ್ತು ಯಮುನಾ ನದಿಗಳಲ್ಲಿ ಸಂಸ್ಕರಿಸದ ಕೊಳಚೆ ನೀರನ್ನು ಬಿಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತಾದ ವಿಚಾರಣೆಯ ಸಂದರ್ಭದಲ್ಲಿ ಮಹಾಕುಂಭ ಮೇಳದ ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಮಟ್ಟದ ಮಲದ ಬ್ಯಾಕ್ಟೀರಿಯಾ ಮತ್ತು ಒಟ್ಟು ಕೋಲಿಫಾರ್ಮ್ ಕಂಡುಬಂದಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಸೋಮವಾರ ಹೇಳಿತ್ತು.

ಈ ಕುರಿತು ಉತ್ತರ ಪ್ರದೇಶದ ವಿಧಾನಸಭೆ ಕಲಾಪವನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಸನಾತನ ಧರ್ಮ, ಗಂಗಾ ಮಾತೆ ಮತ್ತು ಭಾರತದ ವಿರುದ್ಧ ತಪ್ಪು ಮಾಹಿತಿ ಹರಡುವ ಜನರನ್ನು ಖಂಡಿಸಿದ್ದಾರೆ. ನಾವು ಇಲ್ಲಿ ಚರ್ಚೆಯಲ್ಲಿ ಭಾಗವಹಿಸುತ್ತಿರುವಾಗ 56.25 ಕೋಟಿಗೂ ಹೆಚ್ಚು ಭಕ್ತರು ಈಗಾಗಲೇ ಪ್ರಯಾಗ್‌ರಾಜ್‌ನಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ನಾವು ಸನಾತನ ಧರ್ಮ, ಗಂಗಾ ಮಾತೆ, ಭಾರತ ಅಥವಾ ಮಹಾ ಕುಂಭದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವುದು ಅಥವಾ ನಕಲಿ ವೀಡಿಯೊಗಳನ್ನು ಹರಡುವುದು ಈ 56 ಕೋಟಿ ಜನರ ನಂಬಿಕೆಯೊಂದಿಗೆ ಆಟವಾಡಿದಂತೆ ಎಂದು ಟೀಕಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!