September 27, 2026
Sunday, September 27, 2026
spot_img

ವಿಜಯ್ ನಾಮಪತ್ರಕ್ಕೆ ಸಂಕಷ್ಟ: ಆಸ್ತಿ ವ್ಯತ್ಯಾಸ ವಿಚಾರಕ್ಕೆ ಹೈಕೋರ್ಟ್ ನೊಟೀಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ನಟ-ರಾಜಕಾರಣಿ ವಿಜಯ್ ಅವರಿಗೆ ಕಾನೂನು ಸಂಕಷ್ಟ ಎದುರಾಗುವ ಸೂಚನೆ ಕಂಡುಬಂದಿದೆ. ಅವರ ನಾಮಪತ್ರದಲ್ಲಿ ನೀಡಿರುವ ಆಸ್ತಿ ವಿವರಗಳ ವ್ಯತ್ಯಾಸ ವಿಚಾರ ಇದೀಗ ನ್ಯಾಯಾಲಯದ ಗಮನಸೆಳೆದಿದೆ.

ಮದ್ರಾಸ್ ಹೈ ಕೋರ್ಟ್ ಪ್ರಾಥಮಿಕ ವಿಚಾರಣೆಯಲ್ಲಿ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ದೊಡ್ಡ ಪ್ರಮಾಣದ ವ್ಯತ್ಯಾಸ ಇರುವುದಾಗಿ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ. ಪೆರಂಬೂರ್ ಹಾಗೂ ತಿರುಚ್ಚಿ ಪೂರ್ವ ಕ್ಷೇತ್ರಗಳಲ್ಲಿ ಸಲ್ಲಿಸಿದ ದಾಖಲೆಗಳಲ್ಲಿ ಸುಮಾರು 105 ಕೋಟಿ ರೂಪಾಯಿ ವ್ಯತ್ಯಾಸ ಇರುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:

ಈ ಹಿನ್ನೆಲೆ ಚುನಾವಣಾ ಆಯೋಗ ಮತ್ತು ಆದಾಯ ತೆರಿಗೆ ಇಲಾಖೆಗೆ ನ್ಯಾಯಾಲಯ ನೊಟೀಸ್ ಜಾರಿಮಾಡಿದೆ. ಜೊತೆಗೆ ಆಸ್ತಿ ವಿವರಗಳ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.

ಅರ್ಜಿದಾರರ ಪ್ರಕಾರ, ಒಂದು ಅಫಿಡವಿಟ್‌ನಲ್ಲಿ ಆದಾಯವನ್ನು 220 ಕೋಟಿ ರೂಪಾಯಿ ಎಂದು ತೋರಿಸಿದರೆ, ಇನ್ನೊಂದರಲ್ಲಿ 115 ಕೋಟಿ ರೂಪಾಯಿ ಮಾತ್ರ ಉಲ್ಲೇಖಿಸಲಾಗಿದೆ. ಈ ವ್ಯತ್ಯಾಸದ ಬಗ್ಗೆ ಸ್ಪಷ್ಟನೆ ಕೇಳಲಾಗಿದೆ.

ಇದು ಇನ್ನೂ ಪ್ರಾರಂಭಿಕ ಹಂತದಲ್ಲಿದ್ದು, ಅಂತಿಮ ತೀರ್ಪು ಹೊರಬಂದಿಲ್ಲ. ಸಂಬಂಧಪಟ್ಟವರ ಪ್ರತಿಕ್ರಿಯೆ ಆಧರಿಸಿ ಮುಂದಿನ ವಿಚಾರಣೆ ನಡೆಯಲಿದೆ.

Must Read