June 24, 2026
Wednesday, June 24, 2026
spot_img

ಕಾಬೂಲ್ ಹೆದ್ದಾರಿಯಲ್ಲಿ ಉರುಳಿಬಿದ್ದ ಟ್ರಕ್: 10 ಮಕ್ಕಳು ಸೇರಿ 22 ಅಫ್ಘಾನ್ ವಲಸಿಗರ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಮರಳುತ್ತಿದ್ದ ನಿರಾಶ್ರಿತರಿದ್ದ ಟ್ರಕ್ ಒಂದು ಪೂರ್ವ ಅಫ್ಘಾನಿಸ್ತಾನದ ಹೆದ್ದಾರಿಯಲ್ಲಿ ಭೀಕರ ಅಪಘಾತಕ್ಕೆ ಈಡಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಪಲ್ಟಿಯಾದ ಪರಿಣಾಮ, ಕನಿಷ್ಠ 22 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 36ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

ಚಾಲಕ ನಿದ್ರೆಗೆ ಜಾರಿದ್ದೇ ಅಪಘಾತಕ್ಕೆ ಕಾರಣ:

ಜಲಾಲಾಬಾದ್ ಮತ್ತು ರಾಜಧಾನಿ ಕಾಬೂಲ್ ಸಂಪರ್ಕಿಸುವ ಪ್ರಮುಖ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಚಾಲಕನು ನಿದ್ರೆಗೆ ಜಾರಿದ್ದರಿಂದ ನಿಯಂತ್ರಣ ತಪ್ಪಿದ ಟ್ರಕ್ ರಸ್ತೆಯಲ್ಲೇ ಉರುಳಿ ಬಿದ್ದಿದೆ ಎಂದು ತಿಳಿದುಬಂದಿದೆ. ಈ ಭೀಕರ ಅಪಘಾತದಲ್ಲಿ ಗಾಯಗೊಂಡವರಲ್ಲಿ 10 ಮಕ್ಕಳು, 5 ಮಹಿಳೆಯರು ಹಾಗೂ 36 ಪುರುಷರು ಸೇರಿದ್ದಾರೆ. ಗಾಯಾಳುಗಳ ಪರಿಸ್ಥಿತಿ ಗಂಭೀರವಾಗಿದ್ದು, ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಲಗ್ಮನ್ ಪ್ರಾಂತ್ಯದ ಗವರ್ನರ್ ವಕ್ತಾರರಾದ ಅಬ್ದುಲ್ ಮಲಿಕ್ ನಿಯಾಜಯ್ ಮಾಹಿತಿ ನೀಡಿದ್ದಾರೆ.

ಸ್ವದೇಶಕ್ಕೆ ಮರಳುತ್ತಿದ್ದ ನಿರಾಶ್ರಿತರು:

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ರಾಜತಾಂತ್ರಿಕ ಸಂಬಂಧಗಳು ತೀವ್ರವಾಗಿ ಹದಗೆಟ್ಟಿವೆ. ಇದರ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರವು ತನ್ನ ದೇಶದಲ್ಲಿ ಕಾನೂನುಬಾಹಿರವಾಗಿ ನೆಲೆಸಿರುವ ಅಫ್ಘಾನ್ ವಲಸಿಗರು ಮತ್ತು ನಿರಾಶ್ರಿತರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದೆ. ಪಾಕ್ ಸರ್ಕಾರದ ಕಠಿಣ ನಿಲುವಿಗೆ ಹೆದರಿ ಸಾವಿರಾರು ಅಫ್ಘಾನ್ ನಿರಾಶ್ರಿತರು ಕಡೇ ದಿನಗಳಲ್ಲಿ ತಮ್ಮ ತಾಯ್ನಾಡಿಗೆ ಮರಳುತ್ತಿದ್ದಾರೆ. ಹೀಗೆ ಜೀವ ಉಳಿಸಿಕೊಳ್ಳಲು ಸ್ವದೇಶಕ್ಕೆ ಬರುತ್ತಿದ್ದ ನಿರಾಶ್ರಿತರ ಪಾಲಿಗೆ ಈ ಹೆದ್ದಾರಿ ಸಾವು ತಂದಿಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !