September 19, 2026
Saturday, September 19, 2026
spot_img

ಚೀನಾದಲ್ಲಿ ಅಮೆರಿಕ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ, ಆತಿಥ್ಯವನ್ನು ಹಾಡಿ ಹೊಗಳಿದ ಟ್ರಂಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚೀನಾ ಹಾಗೇ ಚೀನಾ ಹೀಗೆ ಎಂದು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ಚೀನಾವನ್ನು ಹಾಡಿ ಹೊಗಳಿದ್ದಾರೆ.

ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ಪೀಪಲ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಮಾತನಾಡಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅತ್ಯುತ್ತಮ ಸ್ನೇಹಿತ ಎಂದಿದ್ದಾರೆ.

ನಿಮ್ಮ ಸ್ನೇಹಿತ ಎಂದು ಹೇಳಿಕೊಳ್ಳೋದಕ್ಕೆ ನನಗೆ ಹೆಮ್ಮೆಯಿಂದೆ. ಅಮೆರಿಕ ಹಾಗೂ ಚೀನಾ ಸಂಬಂಧ ಹಿಂದೆಂದಿಗಿಂತಲೂ ಗಟ್ಟಿಯಾಗಿರಲಿದೆ. ಕ್ಸಿ ಜಿನ್‌ಪಿಂಗ್‌ ಅತ್ಯುತ್ತಮ ನಾಯಕ. ಇದನನು ಹೊರಗೆ ಹೇಳೋಕೆ ನನಗೆ ಬೇಜಾರಿಲ್ಲ. ಆದರೆ ಪ್ರತೀ ಬಾರಿ ಹೇಳಿದಾಗಲು ಹಲವರಿಗೆ ಅದು ಇಷ್ಟವಾಗೋದಿಲ್ಲ. ಆದರೆ ನಾನು ಸತ್ಯ ಹೇಳುವ ಮನುಷ್ಯ. ಇದ್ದಿದ್ದನ್ನು ಇದ್ದಂತೆಯೇ ಹೇಳ್ತೀನಿ ಎಂದಿದ್ದಾರೆ.

ಚೀನಾ ಮಾಡಿರುವ ಕೆಲಸಗಳು, ನೀವು ಅಭಿವೃದ್ಧಿ ಹೊಂದುತ್ತಿರುವ ರೀತಿ ನೋಡಿದರೆ ಸಂತಸವಾಗುತ್ತದೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !