October 19, 2026
Monday, October 19, 2026
spot_img

ಯುದ್ಧ ಶೀಘ್ರವೇ ಕೊನೆಗೊಳ್ಳಲಿದೆ, ನಾವು ಈಗಾಗಲೇ ಗೆದ್ದಿದ್ದೇವೆ ಎಂದ ಟ್ರಂಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ನಮ್ಮ ಮಿಲಿಟರಿ ಕಾರ್ಯಾಚರಣೆ ಇರಾನ್‌ನ ನೌಕಾಪಡೆ, ಡ್ರೋನ್ ಮತ್ತು ಕ್ಷಿಪಣಿ ಸಾಮರ್ಥ್ಯಗಳ ಮೇಲೆ ಗಮನಾರ್ಹ ಹಾನಿಯನ್ನುಂಟುಮಾಡಿದೆ. ನಾವು ಈಗಾಗಲೇ ಹಲವು ವಿಧಗಳಲ್ಲಿ ಗೆದ್ದಿದ್ದೇವೆ, ಆದರೆ ಸಂಪೂರ್ಣ ಗೆದ್ದಿಲ್ಲ ಎಂದಿದ್ದಾರೆ.

ಕಾರ್ಯಾಚರಣೆಯ ಸಮಯದಲ್ಲಿ, ಇರಾನ್‌ನ ನೌಕಾಪಡೆಯು ಭಾರೀ ನಷ್ಟ ಅನುಭವಿಸಿದೆ. ಇರಾನ್‌ನ ಅನೇಕ ಮಿಲಿಟರಿ ನೆಲೆಗಳು ನಾಶವಾಗಿವೆ. ಅಮೆರಿಕವು ತನ್ನ ಉದ್ದೇಶಗಳನ್ನು ವೇಗವಾಗಿ ಸಾಧಿಸುತ್ತಿದೆ.

ಇದರಿಂದ ಯುದ್ಧವು ನಿರ್ಣಾಯಕ ಹಂತದತ್ತ ಸಾಗುತ್ತಿದೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಅಮೆರಿಕ ಅನುಮತಿಸುವುದಿಲ್ಲ ಎಂದಿದ್ದಾರೆ.

Must Read