May 20, 2026
Wednesday, May 20, 2026
spot_img

ಮೂರೇ ದಿನ ಟೈಮ್…! ಇಲ್ಲಾಂದ್ರೆ ಎಲ್ಲಾ ಬ್ಲಾಸ್ಟ್ ಆಗುತ್ತೆ: ಟ್ರಂಪ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರುತ್ತಿರುವ ಹೊತ್ತಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಹೊಸ ಎಚ್ಚರಿಕೆ ನೀಡಿದ್ದಾರೆ. ಕದನ ವಿರಾಮದ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಮೂರು ದಿನಗಳ ಕಾಲಾವಕಾಶ ನೀಡಿರುವ ಟ್ರಂಪ್, ಈ ಅವಧಿಯಲ್ಲಿ ಸೂಕ್ತ ಪ್ರತಿಕ್ರಿಯೆ ಬರದಿದ್ದರೆ ಪರಿಣಾಮ ಗಂಭೀರವಾಗಬಹುದು ಎಂದು ಸೂಚಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಇರಾನ್ ತೈಲ ರಫ್ತು ಸ್ಥಗಿತಗೊಂಡರೆ ಅದರ ಪೈಪ್‌ಲೈನ್ ವ್ಯವಸ್ಥೆಯ ಮೇಲೆ ಭಾರೀ ಒತ್ತಡ ಉಂಟಾಗಲಿದೆ ಇದರಿಂದಾಗಿ ಪೈಪ್‌ಲೈನ್‌ಗಳು ಒಳಗಿನಿಂದಲೇ ಸ್ಫೋಟಗೊಳ್ಳಲಿವೆ ಎಂದು ಹೇಳಿದ್ದಾರೆ. ಇದು ದೇಶದ ತೈಲ ಉತ್ಪಾದನಾ ಸಾಮರ್ಥ್ಯಕ್ಕೂ ದೀರ್ಘಾವಧಿ ಹೊಡೆತ ನೀಡಬಹುದು ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ:

ಇದರ ನಡುವೆಯೇ, ಆರ್ಥಿಕ ದಿಗ್ಬಂಧನ ತೆರವುಗೊಳಿಸಿದರೆ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ಪ್ರಸ್ತಾವನೆಯನ್ನು ಇರಾನ್ ಮುಂದಿಟ್ಟಿದೆ ಎನ್ನಲಾಗಿದೆ. ಆದರೆ ಅಮೆರಿಕ ತನ್ನ ಷರತ್ತುಗಳಲ್ಲಿ ಯಾವುದೇ ಸಡಿಲಿಕೆ ತೋರದ ನಿಲುವು ಮುಂದುವರಿಸಿದೆ.

ಯುರೇನಿಯಂ ಪುಷ್ಟೀಕರಣ ಚಟುವಟಿಕೆಗಳನ್ನು ನಿಲ್ಲಿಸುವುದು ಹಾಗೂ ಸಂಗ್ರಹಿತ ಅಣು ವಸ್ತುಗಳನ್ನು ಹಸ್ತಾಂತರಿಸುವಂತೆ ಅಮೆರಿಕ ಒತ್ತಾಯಿಸಿದ್ದು, ಈ ಬೆಳವಣಿಗೆ ಜಾಗತಿಕ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !