September 18, 2026
Friday, September 18, 2026
spot_img

ಇರಾನ್ ಗೆ ಬಂತು ಮತ್ತೆ ಟ್ರಂಪ್ ಪ್ರಸ್ತಾಪ: ಒಪ್ಪಿದರೆ ಜಲಸಂಧಿ ಮುಕ್ತ, ಇಲ್ಲವೇ ಭೀಕರ ದಾಳಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಜಗತ್ತು ತೈಲ ಅಭಾವವನ್ನು ಎದುರಿಸುತ್ತಿದ್ದು, ಅತ್ತ ಅಮೆರಿಕ, ಇರಾನ್ ದೇಶಗಳು ಮತ್ತೆ ಮತ್ತೆ ಕದನ ವಿರಾಮ ಘೋಷಿಸುವಲ್ಲಿ ವಿಫಲವಾಗಿದ್ದಾರೆ.

ಇದೀಗ ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮುಂದೆ ಹೊಸ ಪ್ರಸ್ತಾಪವನ್ನು ಇಟ್ಟಿದ್ದು, ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಿದರೆ ಆಪರೇಷನ್ ಎಪಿಕ್ ಫ್ಯೂರಿ ಕಾರ್ಯಾಚರಣೆಯನ್ನು ಕೊನೆಗೊಳಿಸಲು ಸಿದ್ಧ ಎಂದು ಘೋಷಿಸಿದ್ದಾರೆ.

ಈ ಕುರಿತು ಟ್ರೂತ್ ಸೋಶಿಯಲ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ತನ್ನ ಪ್ರಮುಖ ಷರತ್ತುಗಳಿಗೆ ಇರಾನ್ ಒಪ್ಪಿಗೆ ನೀಡಿದರೆ, ಈಗಾಗಲೇ ಇತಿಹಾಸ ಸೃಷ್ಟಿಸಿರುವ ಎಪಿಕ್ ಫ್ಯೂರಿ ಕಾರ್ಯಾಚರಣೆ ಅಂತ್ಯಗೊಳ್ಳಲಿದೆ. ಜೊತೆಗೆ ನೌಕಾ ದಿಗ್ಬಂಧನವನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಈ ಮೂಲಕ ಹಾರ್ಮುಜ್ ಜಲಸಂಧಿ ಜಗತ್ತಿಗೆ ಮುಕ್ತ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ತಿಳಿಸಿದ್ದಾರೆ.

ಒಂದೇ ವೇಳೆ ಇರಾನ್ ತನ್ನ ಬೇಡಿಕೆಯನ್ನು ನಿರಾಕರಿಸಿದರೆ, ಮತ್ತೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಈ ಬಾರಿ ದಾಳಿಯ ತೀವ್ರತೆ ಹಿಂದಿಗಿಂತಲೂ ಅತ್ಯಂತ ಭೀಕರವಾಗಿರಲಿದೆ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !