ಬೇಕಾಗಿರುವ ಸಾಮಾಗ್ರಿಗಳು:
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಒಣ ಕೊಬ್ಬರಿ
ಬ್ಯಾಡಗಿ ಮೆಣಸು
ಇಂಗು
ಹುಣಸೆಹಣ್ಣು
ಬೆಲ್ಲ
ಉಪ್ಪು
ಮಾಡುವ ವಿಧಾನ
ಮೊದಲಿಗೆ ಕರಿಬೇವಿನ ಸೊಪ್ಪನ್ನು ಬಿಸಿಲಿನಲ್ಲಿ ಒಣಗಿಸಿಕೊಳ್ಳಿ.
ಒಣಗಿರುವ ಕರಿಬೇವಿನ ಸೊಪ್ಪನ್ನು ಬಾಣಲೆಯಲ್ಲಿ ಹುರಿಯಿರಿ.
ಉದ್ದಿನಬೇಳೆ, ಕಡ್ಲೆಬೇಳೆ, ಬ್ಯಾಡಗಿ ಮೆಣಸಿನಕಾಯಿ, ತುರಿದ ಒಣ ಕೊಬ್ಬರಿ, ಹುಣಸೆ ಹಣ್ಣು ಪ್ರತ್ಯೇಕವಾಗಿ ಫ್ರೈ ಮಾಡಿ.
ತಣ್ಣಗಾದ ಕರಿಬೇವಿನ ಸೊಪ್ಪನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ.
ಹುರಿದ ಬ್ಯಾಡಗಿ ಮೆಣಸಿನ ಕಾಯಿ, ಹುಣಸೆಹಣ್ಣು, ಕಡ್ಲೆಬೇಳೆ, ಉದ್ದಿನಬೇಳೆ, ಒಣ ಕೊಬ್ಬರಿ, ಬೆಲ್ಲ, ಹಾಗೂ ಉಪ್ಪು ಸೇರಿಸಿ ರುಬ್ಬಿಕೊಳ್ಳಿ.
ನಂತರ ಇದನ್ನು ಕರಿಬೇವಿನ ಸೊಪ್ಪಿನ ಪುಡಿಯೊಂದಿಗೆ ಸೇರಿಸಿ, ಇಂಗು ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ