ತಿರುಪತಿ ತಿಮ್ಮಪ್ಪನ ದರ್ಶನ ಈಗ ಮತ್ತಷ್ಟು ಸುಲಭ: ಹೆಚ್ಚುವರಿ ಟಿಕೆಟ್‌ ಬಿಡುಗಡೆ ಮಾಡಲಿದೆ ಟಿಟಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದೆಲ್ಲೆಡೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಯಲ್ಲಿ ಟಿಟಿಡಿ ಮತ್ತಷ್ಟು ಟಿಕೆಟ್‌ ಬಿಡುಗಡೆ ಮಾಡಲು ತೀರ್ಮಾನಿಸಿದೆ.
ತಿರುಮಲ ತಿರುಪತಿ ದೇವಸ್ಥಾನ ಸ್ಟಾಟೆಡ್‌ ಸರ್ವ ದರ್ಶನ ಟೋಕನ್‌ ಹಾಗೂ 300 ರೂ. ಟಿಕೆಟ್‌ ನ ವಿಶೇಷ ದರ್ಶನದ ಟಿಕೆಟ್‌ ಗಳ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಿದೆ.
ಇನ್ನು ಆನ್‌ ಲೈನ್‌ ಹಾಗೂ ಆನ್ ಲೈನ್‌ ಗಳಲ್ಲಿ ಟೋಕನ್‌ ಹಾಗೂ ವಿಶೇಷ ಶೀಘ್ರ ದರ್ಶನದ ಟಿಕೆಟ್‌ ವಿತರಣೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಪ್ರತಿನಿತ್ಯ ಬರುವ ಒಟ್ಟು ಭಕ್ತರ ಸಂಖ್ಯೆಯನ್ನು ಮುಂಚಿನಂತೆ ಮಾಡಲು ಮುಂದಾಗಿದೆ.
ದಿನದಿಂದ ದಿನಕ್ಕೆ ತಿರುಪತಿಗೆ ಭೇಟಿ ನೀಡುತ್ತಿರುವವರ ಸಂಖ್ಯೆಯಲ್ಲಿ ಏರಿಕೆ ಇದ್ದು, 29 ಸಾವಿರದಿಂದ 29 ಸಾವಿರಕ್ಕೆ ಏರಿಕೆಯಾಗಿದೆ.
ನಾಳೆಯಿಂದ ನಾಲ್ಕು ದಿನಗಳ ಕಾಲ ಹೆಚ್ಚುವರಿ 13 ಸಾವಿರ ಟಿಕೆಟ್ಸ್‌ ನೀಡಲಾಗುತ್ತದೆ. ಪ್ರತಿದಿನಕ್ಕೆ 5 ಸಾವಿರ ಸ್ಲಾಟೆಡ್‌ ಸರ್ವ ದರ್ಶನದ ಟಿಕೆಟ್‌ ನೀಡಲಾಗುತ್ತದೆ. ಮಾರ್ಚ್‌ ತಿಂಗಳಿಗೆ ದಿನಕ್ಕೆ 25 ಸಾವಿರದಂತೆ 300 ರೂ. ನ ಟಿಕೆಟ್‌ ಗಳು ಹಾಗೂ 20 ಸಾವಿರ ಸ್ಲಾಟೆಡ್‌ ಸರ್ವ ದರ್ಶನ ಟಿಕೆಟ್ ಕೊಡಲಾಗಿತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!