August 31, 2026
Monday, August 31, 2026
spot_img

‘ಕರುಪ್ಪು’ಗೆ ಟಕ್ಕರ್, ‘ಪೆದ್ದಿ’ಗೆ ಪೈಪೋಟಿ: 2026ರ ಗಲ್ಲಾಪೆಟ್ಟಿಗೆಯಲ್ಲಿ ಯಶ್ ಮಾಸ್ ಕಲೆಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಸಿನಿಮಾ ಥಿಯೇಟರ್‌ಗೆ ಬಂದಾಗ ಆಗಿದ್ದ ಹವಾ ತೀರಾ ಸಣ್ಣದೇನಲ್ಲ. ಓಪನಿಂಗ್ ದಿನ ರಿಲೀಸ್ ಆದ ಸೌಂಡ್ ನೋಡಿ ಪ್ರತಿಯೊಬ್ಬರೂ ಶಾಕ್ ಆಗಿದ್ರು. ಆದ್ರೆ, ದಿನ ಕಳಿತಾ ಕಳಿತಾ ಕಲೆಕ್ಷನ್‌ನಲ್ಲಿ ಕೊಂಚ ಏರಿಳಿತ ಕಾಣಿಸ್ತಿದೆ. ಸಿನಿಮಾ ಮೇಕಿಂಗ್ ಬೆಂಕಿ ಇದೆ, ಆದ್ರೆ ಕಥೆನೇ ಸ್ವಲ್ಪ ವೀಕ್ ಆಯ್ತು ಅಂತ ಜನ ಮಾತಾಡ್ಕೋತಿದ್ದಾರೆ.

ಆದ್ರೂ ಕಲೆಕ್ಷನ್‌ನಲ್ಲೇನೂ ಯಶ್ ಗತ್ತು ಕಡಿಮೆಯಾಗಿಲ್ಲ. ರಿಲೀಸ್ ಆದ ಐದೇ ದಿನಕ್ಕೆ ವರ್ಲ್ಡ್‌ವೈಡ್ 285.20 ಕೋಟಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ಧೂಳೆಬ್ಬಿಸಿದೆ. ಇನ್ನೇನು ಒಂದೆರಡು ದಿನದಲ್ಲಿ 300 ಕೋಟಿ ಕ್ಲಬ್ ಸೇರೋದು ಪಕ್ಕಾ ಆಗಿದೆ.

ಇಂಡಿಯಾದಲ್ಲಿ ಐದನೇ ದಿನ 16,241 ಶೋಗಳಿಂದ 23.00 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದು, ದೇಶಾದ್ಯಂತ 5 ದಿನದ ಒಟ್ಟು ನೆಟ್ ಕಲೆಕ್ಷನ್ ಬರೋಬ್ಬರಿ 214.10 ಕೋಟಿ ದಾಟಿದೆ. ಸಂಡೇ ದಿನ ಥಿಯೇಟರ್‌ನಲ್ಲಿ 25.3% ಆಕ್ಯುಪೆನ್ಸಿ ಇತ್ತು, ಆದ್ರೆ ಮೊದಲ ದಿನ ಇದ್ದಷ್ಟು ಶೋಗಳು ಈಗಿಲ್ಲ.

2026ರ ದೊಡ್ಡ ಸಿನಿಮಾಗಳ ಜೊತೆ ಕಾಂಪಿಟೇಷನ್ ಕೊಡ್ತಿರೋ ‘ಟಾಕ್ಸಿಕ್’, ಸದ್ಯದಲ್ಲೇ ಸೂರ್ಯ ಅವರ ‘ಕರುಪ್ಪು’ (304 ಕೋಟಿ) ರೆಕಾರ್ಡ್ ಬ್ರೇಕ್ ಮಾಡೋಕೆ ರೆಡಿಯಾಗಿದೆ. ರಾಮ್ ಚರಣ್ ಅಭಿನಯದ ‘ಪೆದ್ದಿ’ (5 ದಿನಕ್ಕೆ 315 ಕೋಟಿ) ಗೂ ಹತ್ತಿರದಲ್ಲೇ ಇದೆ. ಆದ್ರೆ ಸನ್ನಿ ಡಿಯೋಲ್ ಅವರ ‘ಬೋರ್ಡರ್ 2’ (450 ಕೋಟಿ) ಮತ್ತು ರಣ್‌ವೀರ್ ಸಿಂಗ್‌ ಅವರ ‘ಧುರಂಧರ್ 2’ (1,813 ಕೋಟಿ) ಈ ಟಾರ್ಗೆಟ್ ರೀಚ್ ಆಗೋಕೆ ಯಶ್‌ಗೆ ಇನ್ನು ಸ್ವಲ್ಪ ಟೈಮ್ ಬೇಕು.

ಮೊದಲ ದಿನದ ಹವಾ ನೋಡಿ ಯಶ್ ದೊಡ್ಡ ರೆಕಾರ್ಡ್ ಮಾಡ್ತಾರೆ ಅನ್ಕೊಂಡಿದ್ರು, ಆದ್ರೆ ಕಥೆಯ ವೀಕ್‌ನೆಸ್ ಕಲೆಕ್ಷನ್‌ಗೆ ಸ್ವಲ್ಪ ಬ್ರೇಕ್ ಹಾಕಿದೆ. ಒಟ್ಟಿನಲ್ಲಿ, ಕಥೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ಬಂದರೂ ಯಶ್ ಸ್ಟಾರ್‌ಡಮ್ ಮಾತ್ರ ಗಲ್ಲಾಪೆಟ್ಟಿಗೆಯಲ್ಲಿ ಕಮ್ಮಿ ಆಗಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !