Sunday, December 4, 2022

Latest Posts

ರಸ್ತೆಗುಂಡಿಯಿಂದ ಹಳ್ಳಕ್ಕೆ ಉರುಳಿದ ಖಾಸಗಿ ಬಸ್:‌ ಪ್ರಯಾಣಿಕರು ಬಚಾವ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರಷ್ಟೇ ಅಲ್ಲ ತುಮಕೂರು ಜನತೆಗೂ ರಸ್ತೆ ಗುಂಡಿಗಳ ಕಾಟ ತಪ್ಪಿಲ್ಲ. ರಸ್ತೆ ಗುಂಡಿಗೆ ಸಿಲುಕಿದ ಖಾಸಗಿ ಬಸ್‌ವೊಂದು ನಿಯಂತ್ರನ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದ ಘಟನೆ ಗುರುವಾರ ತಡರಾತ್ರಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವಿರೂಪಸಮುದ್ರ ಬಳಿ  ನಡೆದಿದೆ.

ಅದೃಷ್ಟವಾಶಾತ್ ಬಸ್​ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಪ್ರಾಣಹಾನಿಯಾದೆಮ ಎಲ್ಲರೂ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪಾವಗಡ ತಾಲೂಕಿನ ಹಲವು ಹಳ್ಳಿಗಳಿಂದ ಕಾರ್ಮಿಕರು ಕೆಲಸಕ್ಕೆ ಕರೆದೊಯ್ಯುತ್ತಿದ್ದ ಎನ್ನಲಾಗಿದ್ದು, ಹೊಂಡಗುಂಡಿಗಳಿಂದಾಗಿ ನಿಯಂತ್ರಣ ಕಳೆದುಕೊಂಡು ಈ ದುರಂತ ನಡೆದಿದೆ. ಘಟನೆ ಸಂಬಂಧ ತಿರುಂಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!