ಟರ್ಕಿ ಭೂಕಂಪನ: 90 ಗಂಟೆಗಳ ಬಳಿಕ ಅವಶೇಷಗಳಿಂದ 10 ತಿಂಗಳ ಮಗುವಿನ ರಕ್ಷಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಟರ್ಕಿ ಹಾಗೂ ಸಿರಿಯಾದಲ್ಲಿ ನಡೆದ ಭೀಕರ ಭೂಕಂಪನದಲ್ಲಿ ಸಾವಿನ ಸಂಖ್ಯೆ 20 ಸಾವಿರ ದಾಟಿದೆ. ಇನ್ನೂ ರಕ್ಷಣೆ ಕಾರ್ಯಾಚರಣೆ ನಡೆಯುತ್ತಿದೆ. ಈ ನಡುವೆ ಸುಮಾರು 90 ಗಂಟೆಗಳ ನಂತರ ಟರ್ಕಿಯಲ್ಲಿ ನವಜಾತ ಶಿಶು ಮತ್ತು ತಾಯಿಯನ್ನು ಅವಶೇಷಗಳಿಂದ ರಕ್ಷಿಸಲಾಗಿದೆ.
ದಕ್ಷಿಣ ಹಟಾಯ್ ಪ್ರಾಂತ್ಯದ ಪಾಳುಬಿದ್ದ ಕಟ್ಟಡದಿಂದ ಯಾಗಿಜ್ ಎಂಬ ಹೆಸರಿನ 10-ದಿನದ ಗಂಡು ಮಗುವನ್ನುರಕ್ಷಿಸಲಾಗಿದೆ. ಬಳಿಕ ಕಂಬಳಿಯಲ್ಲಿ ಸುತ್ತಿ ಆಂಬ್ಯುಲೆನ್ಸ್‌ಗೆ ಸಾಗಿಸಿದರು.
ನಾಲ್ಕು ದಿನಗಳ ನಂತರ ಅನೇಕ ಬದುಕುಳಿದವರನ್ನು ಕಂಡುಹಿಡಿಯುವ ಭರವಸೆ ಕಡಿಮೆಯಾಗುತ್ತಿದೆ. ಆದಾಗ್ಯೂ, ಟರ್ಕಿ ಮತ್ತು ಸಿರಿಯಾ ಎರಡರಲ್ಲೂ ಹುಡುಕಾಟ ಮತ್ತು ರಕ್ಷಣಾ ಪ್ರಯತ್ನಗಳು ಮುಂದುವರೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!