September 14, 2026
Monday, September 14, 2026
spot_img

CINE | ನಿರ್ದೇಶಕ ಅಟ್ಲೀ ಮನೆಗೆ ಲಕ್ಷ್ಮಿ ಎಂಟ್ರಿ! ಮೂರರಿಂದ ನಾಲ್ಕಾಯ್ತು ಫ್ಯಾಮಿಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿರ್ದೇಶಕ, ನಿರ್ಮಾಪಕ ಅಟ್ಲೀ ಮನೆಯಲ್ಲಿ ಸಂಭ್ರಮ ತುಂಬಿದೆ. ಅಟ್ಲೀ ಪತ್ನಿ ಪ್ರಿಯಾ ಎರಡನೇ ಮಗುವಿಗೆ ಜನ್ಮ ನೀಡಿದ್ದು, ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ.

ಈ ಬಗ್ಗೆ ಅಟ್ಲೀ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈಗಾಗಲೇ ದಂಪತಿಗೆ ಮೂರು ವರ್ಷದ ಮಗನಿದ್ದಾರೆ. ಅವನ ವಿಭಿನ್ನವಾದ ಕಾರ್ಟೂನ್‌ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ.

ನನಗೊಬ್ಬಳು ತಂಗಿ ಸಿಕ್ಕಿದ್ದಾಳೆ. ನಾನೀಗ ಬಿಗ್‌ ಬ್ರದರ್‌ ಎಂದು ಮಗ ಮೀರ್‌ ಹೇಳುವಂತೆ ಕಾರ್ಟೂನ್‌ ಸೃಷ್ಟಿಸಲಾಗಿದೆ. ಸೆಲೆಬ್ರಿಟಿಗಳಾದ ದೀಪಿಕಾ ಪಡುಕೋಣೆ, ಶಾರುಖ್‌ ಖಾನ್‌, ರಶ್ಮಿಕಾ ಮಂದಣ್ಣ, ಅನನ್ಯ ಪಾಂಡೆ, ಸಮಂತಾ ರುತ್‌ ಪ್ರಭು, ಹುಮಾ ಖುರೇಶಿ ಸೇರಿದಂತೆ ಹಲವಾರು ದಂಪತಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !