ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಂಭಮೇಳದಿಂದ ಫೇಮಸ್ ಆದ ಹುಡುಗಿ ಮೊನಾಲಿಸಾ ಇದೀಗ ತಮ್ಮ ಮದುವೆಯ ವಿಷಯದಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಅನ್ಯಧರ್ಮದ ಯುವಕನನ್ನು ಮದುವೆಯಾಗಿರುವ ಮೊನಾಲಿಸಾಗೆ ಸಂಕಷ್ಟ ತಪ್ಪುತ್ತಿಲ್ಲ. ಮೊನಾಲಿಸಾ ಪತಿ ಫರ್ಮಾನ್ ಖಾನ್ ಮೇಲೆ ಇದೀಗ ಪೋಕ್ಸೋ ಕೇಸ್ ದಾಖಲಾಗಿದೆ.
ಹೌದು, ಮೊನಾಲಿಸಾ ಜತೆ ಮದುವೆಯಾಗುವ ಸಂದರ್ಭದಲ್ಲಿ ಆಕೆಗೆ ಬರೀ 16 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ. ಈ ಸಂಬಂಧ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಹೇಶ್ವರ ಪೊಲೀಸ್ ಠಾಣೆಯಲ್ಲಿ ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಮೊನಾಲಿಸಾ ಹಾಗೂ ಫರ್ಮಾನ್ ಖಾನ್ ಕೇರಳಂನಲ್ಲಿ ಮದುವೆಯಾದ ನಂತರ ಅವರ ವಿವಾಹದ ಬಗ್ಗೆ ಸಾಕಷ್ಟು ಸುದ್ದಿಗಳು ಮುನ್ನೆಲೆಗೆ ಬಂದಿದ್ದವು. ಲವ್ ಜಿಹಾದ್, ಮೊನಾಲಿಸಾ ವಯಸ್ಸು ಇನ್ನಿತರ ವಿಷಯಗಳ ಬಗ್ಗೆ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಕೇರಳ ಮತ್ತು ಮಧ್ಯಪ್ರದೇಶದಲ್ಲಿ ವಿಸ್ತಾರವಾದ ತನಿಖೆ ಆರಂಭಿಸಿತ್ತು.
ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ಅಂತರ್ ಸಿಂಗ್ ಆರ್ಯ ಅವರು ನಡೆಸಿದ ವಿಚಾರಣೆಯ ಸಂದರ್ಭದಲ್ಲಿ ಈ ವಿಷಯ ಬಯಲಾಗಿದೆ. ಮೊನಾಲಿಸಾ ಪಾರ್ಧಿ ಬುಡಕಟ್ಟು ಜನಾಂಗಕ್ಕೆ ಸೇರಿದ್ದು, ಮದುವೆ ಸಂದರ್ಭದಲ್ಲಿ ಅವರಿಗೆ 18 ವರ್ಷ ತುಂಬಿರಲಿಲ್ಲ, ಅಪ್ತಾಪ್ರೆಯಾಗಿದ್ದರು. ಇನ್ನೂ ಮಹೇಶ್ವರದಲ್ಲಿನ ಆಸ್ಪತ್ರೆ ದಾಖಲೆಗಳ ಪ್ರಕಾರ, ಮೊನಾಲಿಸಾ 2009ರ ಡಿಸೆಂಬರ್ 30ರಂದು ಜನಿಸಿದ್ದು, 2026ರ ಮಾರ್ಚ್ 11ರಂದು ಮದುವೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮೊನಾಲಿಸಾಗೆ ಕೇವಲ 16 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ.
ನಕಲಿ ಜನನ ಪ್ರಮಾಣಪತ್ರ ಮಾಡಿಸಿಕೊಂಡು ಬಂದು ಮದುವೆಯಾಗಿದ್ದಾರೆ. ಇದರಲ್ಲಿ ಯಾರೆಲ್ಲ ಸಹಾಯ ಮಾಡಿದ್ದಾರೆ ಎನ್ನುವ ಬಗ್ಗೆ ವಿಚಾರಣೆ ನಡೆಯುತ್ತಿದೆ.



