October 10, 2026
Saturday, October 10, 2026
spot_img

ಬೆಂಗಳೂರಿನಲ್ಲಿ ಕೋಟಿ ಕೋಟಿ ಮೊತ್ತದ ನಕಲಿ ಐಟಿಸಿ ಪಡೆದು ವಂಚಿಸಿದ ಇಬ್ಬರು ಆರೋಪಿಗಳು ಅರೆಸ್ಟ್‌!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಂತಾರಾಜ್ಯ ಮಟ್ಟದ ಬೃಹತ್ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚನೆ ಜಾಲವನ್ನು ಪತ್ತೆಹಚ್ಚುವಲ್ಲಿ ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಬರೋಬ್ಬರಿ 2,384 ಕೋಟಿ ರೂಪಾಯಿಗಳ ನಕಲಿ ಐಟಿಸಿ ಸೃಷ್ಟಿಸಿ ವಂಚಿಸುತ್ತಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಸಲೀಮುಲ್ಲಾ ಬೇಗ್ (59) ಮತ್ತು ಹಸೇನ್ ಬೇಗ್ (35) ಎಂದು ಗುರುತಿಸಲಾಗಿದೆ.

2,172 ಕೋಟಿ ರೂ. ನಕಲಿ ವಹಿವಾಟು ತೋರಿಸಿ ಸಲೀಮುಲ್ಲಾ 382 ಕೋಟಿ ರೂಪಾಯಿಗಳ ನಕಲಿ ITC ಪಡೆದಿದ್ದನು. ಹಸೇನ್ ಬೇಗ್ 55 ಸಂಸ್ಥೆಗಳಿಂದ 212 ಕೋಟಿ ರೂ. ವಹಿವಾಟಿನಿಂದ 35 ಕೋಟಿ ರೂ. ಹಣವನ್ನು ಪಡೆದಿದ್ದ ಎಂದು ತಿಳಿದು ಬಂದಿದೆ. ಈ ಮೂಲಕ ಇಬ್ಬರು ಸುಮಾರು 420 ಕೋಟಿ ರೂಪಾಯಿಗಳ ನಕಲಿ ಐಟಿಸಿ ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ.

ಈ ಆರೋಪಿಗಳು ಟಂಗ್‌ಸ್ಟನ್ ಕಾರ್ಬೈಡ್ ಸ್ಕ್ರ್ಯಾಪ್, ಇ-ವೇಸ್ಟ್ ಹಾಗೂ ಇತರ ಸ್ಕ್ರ್ಯಾಪ್‌ಗಳ ಹೆಸರಿನಲ್ಲಿ ನಕಲಿ ಬಿಲ್ಲಿಂಗ್ ನಡೆಸುತ್ತಿದ್ದರು. ಈ ಮೂಲಕ ಜಿಎಸ್‌ಟಿ ವಂಚನೆ ಮಾಡುತ್ತಿದ್ದರು.

ಕಳೆದ ಜನವರಿಯಲ್ಲಿ 1,464 ಕೋಟಿ ವಹಿವಾಟು ಸಂಬಂಧ ಐವರನ್ನು ಅಧಿಕಾರಿಗಳು ಬಂಧಿಸಿದ್ದರು. ಇದೀಗ ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.

Must Read