September 28, 2026
Monday, September 28, 2026
spot_img

ಕೊಲ್ಲೂರು ಬಳಿ ಜೀಪು-ಟೆಂಪೋ ನಡುವೆ ಭೀಕರ ಅಪಘಾತ: ಕೇರಳದ ಇಬ್ಬರು ಪ್ರವಾಸಿಗರು ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಡುಪಿ ಜಿಲ್ಲೆಯ ಕೊಡಚಾದ್ರಿಯಿಂದ ಕೊಲ್ಲೂರು ಕಡೆಗೆ ಕೇರಳದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜೀಪು ಹಾಗೂ ಟೆಂಪೋ ಮಧ್ಯೆ ಭಾನುವಾರ ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಎಂಟು ಮಂದಿ ಗಾಯಗೊಂಡಿದ್ದಾರೆ.

ಮೃತರನ್ನು ಕೇರಳದ ಜ್ಯೋತಿ(35) ಹಾಗೂ ಆರ್ಯ ಅನೂಪ್(28) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಕುಂದಾಪುರ ಹಾಗೂ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲ್ಲೂರಿನತ್ತ ತೆರಳುತ್ತಿದ್ದ ಜೀಪು

ಕೊಡಚಾದ್ರಿಯಿಂದ ಕೊಲ್ಲೂರಿನತ್ತ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜೀಪು ಹಾಗೂ ಕೊಲ್ಲೂರು ಕಡೆಯಿಂದ ನಾಗೋಡಿ ಕಡೆಯತ್ತ ಸಾಗುತ್ತಿದ್ದ ಟೆಂಪೋ ಮಧ್ಯೆ ಈ ಅಪಘಾತ ನಡೆದಿದೆ.

ಸ್ಥಳಕ್ಕೆ ಕೊಲ್ಲೂರು ಠಾಣೆ ಪಿಎಸ್‌ಐಗಳಾದ ವಿನಯ್ ಎಂ.ಕೊರ್ಲಹಳ್ಳಿ ಭೀಮಾ ಶಂಕರ್ ಭೇಟಿ ನೀಡಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read