July 4, 2026
Saturday, July 4, 2026
spot_img

ಮೀನುಗಾರಿಕೆಗೆ ಎರಡು ತಿಂಗಳುಗಳ ರಜೆ: ಯಾಂತ್ರೀಕೃತ ಬೋಟ್‌ಗೆ ನಿಷೇಧ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಯಾಂತ್ರೀಕೃತ ಮೀನುಗಾರಿಕೆ ಚಟುವಟಿಕೆಗಳ ಮೇಲೆ 61 ದಿನಗಳ ನಿಷೇಧ ಹೇರಲಾಗುತ್ತಿದೆ. ಇದೇ ಜೂ.1 ರಿಂದ ಜು.31 ರವರೆಗೆ ಈ ನಿಷೇಧ ಜಾರಿಯಲ್ಲಿರಲಿದ್ದು, ಜಿಲ್ಲಾಧಿಕಾರಿಗಳು ಈ ಕುರಿತು ಆದೇಶ ಹೊರಡಿಸಿದ್ದಾರೆ.

ಯಾವ ಯಾವ ಭಾಗದಲ್ಲಿ ನಿಷೇಧ?

ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಬರುವ 12 ನಾಟಿಕಲ್ ಮೈಲ್ ಕಡಲ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳ ಈ ನಿಷೇಧ ಅನ್ವಯವಾಗಲಿದೆ.

ಯಾವುದಕ್ಕೆಲ್ಲಾ ಇದೆ ನಿಷೇಧ?

ಈ ಅವಧಿಯಲ್ಲಿ ಎಲ್ಲಾ ಯಾಂತ್ರೀಕೃತ ದೋಣಿಗಳು, ಹತ್ತು ಅಶ್ವಶಕ್ತಿಗಿಂತ ಹೆಚ್ಚು ಸಾಮರ್ಥ್ಯದ ಮೋಟಾರೀಕೃತ ದೋಣಿಗಳಲ್ಲಿ ಮೀನುಗಾರಿಕೆ, ಯಾವುದೇ ಬಲೆ, ಸಾಧನ ಬಳಸಿ ಮೀನುಗಾರಿಕೆ ನಡೆಸುವುದಕ್ಕೆ ಸಂಪೂರ್ಣ ನಿಷೇಧವಿದೆ.

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ

ಆಡಳಿತದ ಮೀನುಗಾರಿಕೆ ನಿಷೇಧ ಆದೇಶ ಉಲ್ಲಂಘಿಸುವ ಮೀನುಗಾರರು ಹಾಗೂ ಬೋಟ್ ಮಾಲೀಕರ ವಿರುದ್ಧ ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆ- 1986ರ ಅಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಏಕೆ ಈ ನಿಷೇಧ?

ಮಳೆಗಾಲದಲ್ಲಿ ಮೀನುಗಳ ಸಂತಾನೋತ್ಪತ್ತಿ ಪ್ರಕ್ರಿಯೆ ನಡೆಯುವ ಹಿನ್ನೆಲೆಯಲ್ಲಿ ಪ್ರತೀ ವರ್ಷ ಮೀನುಗಾರಿಕೆ ನಿಷೇಧ ಜಾರಿಗೊಳಿ ಸಲಾಗುತ್ತದೆ. ಸಮುದ್ರ ಜೀವಿಗಳ ಸಂರಕ್ಷಣೆ ಮತ್ತು ಮೀನು ಸಂಪತ್ತಿನ ವೃದ್ಧಿಗಾಗಿ ಈ ಕ್ರಮವನ್ನು ಅತ್ಯಂತ ಮಹತ್ವದಂತೆ ಪರಿಗಣಿಸಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !