Tuesday, October 3, 2023

Latest Posts

ಲಾಲ್ ಬಾಗ್ ‘ಫ್ಲವರ್ ಶೋ’ ವೀಕ್ಷಣೆಗೆ ಇನ್ನೆರಡು ದಿನ ಮಾತ್ರ ಅವಕಾಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರಿನ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫ್ಲವರ್‌ ಶೋ ನೋಡಲು ಜನಸಾಗರವೇ ಹರಿದುಬರುತ್ತಿದೆ. ವಿವಿಧ ಬಗೆಯ ಹೂವುಗಳನ್ನು ಕಂಡು ಸಾರ್ವಜನಿಕರು ಸಂತಸಪಟ್ಟಿದ್ದಾರೆ. ಆದರೆ ಸಾರ್ವಜನಿಕರು ಗಮನಿಸಬೇಕಾದ ಸಂಗತಿಯೆಂದರೆ, ಫ್ಲವರ್‌ ಶೋ ವೀಕ್ಷಿಸಲು ಇನ್ನೆರಡು ದಿನ ಮಾತ್ರ ಅವಕಾಶವಿರುತ್ತದೆ.

ಆಗಸ್ಟ್ 04 ರಂದು ಫ್ಲವರ್ ಶೋಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದರು. ಆಗಸ್ಟ್ 15 ರಂದು ಅಂದರೆ ನಾಳೆ ಫ್ಲವರ್ ಶೋ ವೀಕ್ಷಣೆಗೆ ತೆರೆಬೀಳಲಿದೆ.

76 ನೇ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ 214ನೇ ಫ್ಲವರ್ ಶೋ ಆಯೋಜನೆ ಮಾಡಲಾಗಿದ್ದು, ವಿಧಾನಸೌಧ ಹಾಗೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪರಿಕಲ್ಪನೆಯಲ್ಲಿ ಈ ವರ್ಷದ ಫ್ಲವರ್ ಶೋ ಮೂಡಿ ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!