April 12, 2026
Sunday, April 12, 2026
spot_img

ಪಾಕಿಸ್ತಾನಕ್ಕೆ ಶಾಕ್ ಕೊಟ್ಟ ಯುಎಇ: ಕೊಟ್ಟ ಹಣ ವಾಪಾಸ್‌ ನೀಡಲು ಸೂಚನೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಇರಾನ್ ಹಾಗು ಅಮೆರಿಕ ನಡುವೆ ಮಧ್ಯಸ್ಥಿಕೆ ನಡೆಸಲು ಹೋಗಿ ಏಟು ತಿಂದ ಪಾಕಿಸ್ತಾನ ಈಗಾಗಲೇ ಆರ್ಥಿಕ ಮುಗ್ಗಟ್ಟಿನಿಂದ ಕಂಗಾಲಾಗಿದ್ದು, ಇದರ ನಡುವೆ ಯುನೈಟೆಡ್ ಅರಬ್ ಎಮಿರೇಟ್ಸ್ ಬಿಗ್ ಶಾಕ್ ನೀಡಿದೆ.

ಪಾಕಿಸ್ತಾನಕ್ಕೆ ಸಂಕಷ್ಟದ ಕಾಲದಲ್ಲಿ ನೆರವಾಗಿದ್ದ ಯುಎಇ ಇದೀಗ ತಾನು ನೀಡಿದ್ದ 2 ಬಿಲಿಯನ್ ಅಮೆರಿಕನ್ ಡಾಲರ್ ಸಾಲವನ್ನು ತಕ್ಷಣವೇ ಹಿಂದಿರುಗಿಸುವಂತೆ ಸೂಚನೆ ನೀಡಿದ್ದು, ಪಾಕಿಸ್ತಾನಕ್ಕೆ ಹೊಸ ತಲೆನೋವು ತಂದಿಟ್ಟಿದೆ.

ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿ ಸುರಕ್ಷಿತ ಠೇವಣಿಯಾಗಿ ಇಡಲಾಗಿತ್ತು. ಆದರೆ ಇದೀಗ ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದ ಯುಎಇ ಭವಿಷ್ಯದ ಆರ್ಥಿಕತೆ ಮೇಲೆಯೂ ಪರಿಣಾಮ ಬೀರಿದ್ದು, ಹೀಗಾಗಿ ಹಣವನ್ನು ತಕ್ಷಣ ಹಿಂದಿರುಗಿಸುವಂತೆ ಕೇಳಿದ್ದು, ಈ ತಿಂಗಳ ಅಂತ್ಯದ ವೇಳೆಗೆ ಹಿಂದಿರುಗಿಸಲಿದೆ ಎಂದು ಹೇಳಿದೆ.

ಈ ಸಾಲದ ಮೊತ್ತದ ಮೇಲೆ ಪಾಕಿಸ್ತಾನವು ಸುಮಾರು ಶೇ. 6ರಷ್ಟು ಬಡ್ಡಿಯನ್ನು ಪಾವತಿಸುತ್ತಿದ್ದು, ಈ ಹಿಂದೆ ಯುಎಇ ಪ್ರತಿ ವರ್ಷ ಈ ಠೇವಣಿಯನ್ನು ನವೀಕರಿಸುತ್ತಿತ್ತು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಪಾಕಿಸ್ತಾನಕ್ಕೆ ಸುಮಾರು 12 ಬಿಲಿಯನ್ ಡಾಲರ್ ಬಾಹ್ಯ ಠೇವಣಿಗಳ ನವೀಕರಣದ ಅಗತ್ಯವಿತ್ತು. ಸೌದಿ ಅರೇಬಿಯಾದಿಂದ 5 ಬಿಲಿಯನ್ ಡಾಲರ್ , ಚೀನಾದಿಂದ 4 ಬಿಲಿಯನ್ ಡಾಲರ್ ಮತ್ತು ಯುಎಇ ನೀಡಿದ್ದ 3 ಬಿಲಿಯನ್ ಡಾಲರ್ ಸಾಲವೂ ಸೇರಿದೆ. ಇದೀಗ ಪಾಕಿಸ್ತಾನದ ಬಳಿ 21 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಮೀಸಲು ನಿಧಿಯಿದೆ. ಇದರಲ್ಲಿ ಈಗ ಯುಎಇಗೆ 16,600 ಕೋಟಿ ರೂಪಾಯಿ ಪಾವತಿಸಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !