‘ಯುಐ’ ಸಾಂಗ್ ರಿಲೀಸ್: ಅಭಿಮಾನಿಗಳಿಗೆ ಟ್ರೋಲ್ ಸಾಂಗ್ ಕೊಟ್ಟ ಉಪ್ಪಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಿಯಲ್ ಸ್ಟಾರ್ ಉಪ್ಪಿ (Upendra) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಎಲ್ಲರೂ ಕಾತರದಿಂದ ಎದುರು ನೋಡ್ತಿದ್ದ ‘ಯುಐ’ ಚಿತ್ರದ ಸಾಂಗ್ ರಿಲೀಸ್ ಆಗಿದೆ.

ರಿಯಲ್ ಸ್ಟಾರ್ ಉಪೇಂದ್ರ (Actor Upendra) ಮತ್ತೊಮ್ಮೆ ಮ್ಯಾಜಿಕ್ ಮಾಡಿದ್ದಾರೆ. ಪ್ರತಿ ಕಂಟೆಂಟ್‌ನಲ್ಲೂ ಒಂದು ಸ್ಪೆಷಲ್ ಎಲಿಮೆಂಟ್‌ನ ನಿಮ್ಮ ಮುಂದೆ ಇಡಲು ಸಖತ್ ತಯಾರಿ ಮಾಡಿಕೊಂಡಿದ್ದಾರೆ. ಟ್ರೋಲ್ ಆದ ಸೋಷಿಯಲ್ ಮೀಡಿಯಾದ ಕಂಟೆಂಟ್ ಮೇಲೆ ಸಾಂಗ್ ಮಾಡಿ ಮತ್ತೆ ಗಮನ ಸೆಳೆದಿದ್ದಾರೆ. ಚಾಲ್ತಿಯಲ್ಲಿರುವ ಎಲ್ಲಾ ವಿಚಾರಗಳ ಮೇಲೆ ಉಪ್ಪಿ ಗಮನ ಹರಿಸಿದ್ದಾರೆ. ಸಾಂಗ್ ನೋಡಿದವರು ಈ ವಿಚಾರಕ್ಕೆ ಉಪ್ಪಿ ಸ್ಪೆಷಲ್ ಅಂತಿದ್ದಾರೆ.

ಸದ್ಯ ಟ್ರೋಲ್ ಸಾಂಗ್‌ಗೆ (Troll Song) ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ (Reeshma Nanaiah) ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಯುಐ ಬೆಡಗಿ ಡ್ಯಾನ್ಸ್‌ಗೆ ಪ್ಲಸ್ ಲಿರಿಕ್ಸ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಮುಂಬೈನ ಯುಟ್ಯೂಬ್ ಹೆಡ್ ಆಫೀಸ್‌ನಲ್ಲಿ ಈ ಸಾಂಗ್ ಲಾಂಚ್ ಮಾಡಲಾಗಿದೆ. ಬೆಳ್ಳುಳ್ಳಿ ಕಬಾಬ್‌, ಕರಿಮಣಿ ಮಾಲೀಕ, ಗುಮ್ಮಿಸಿಕೊಳ್ತೀಯಾ, ತಗಡು ಹೀಗೆ ನಾ ನಾ ವೈರಲ್‌ ಆದ ಪದಗಳನ್ನೇ ಬಳಸಿ ಯುಐ ಟ್ರೋಲ್‌ ಸಾಂಗ್‌ ರಿಲೀಸ್‌ ಮಾಡಿ ಸೈ ಎನಿಸಿಕೊಂಡಿದ್ದಾರೆ. 5 ಭಾಷೆಗಳಲ್ಲಿ ರೆಡಿಯಾಗಿರುವ ಹಾಡಿಗೆ ಆಯಾ ಭಾಷೆಗೆ ಅನುಸಾರ ಟ್ರೋಲ್‌ಗಳನ್ನ ಕಂಟೆಂಟ್ ಆಗಿ ಬಳಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!