ಕೇನ್ಸ್ ಚಲನಚಿತ್ರೋತ್ಸವದಲ್ಲಿ ಆಘಾತಕಾರಿ ಘಟನೆ: ರೆಡ್ ಕಾರ್ಪೆಟ್ ಮೇಲೆ‌ ಯುವತಿ ಅರೆಬೆತ್ತಲೆ ಪ್ರೊಟೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಫ್ರಾನ್ಸ್ ನ ಪ್ರಸಿದ್ಧ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ರೆಡ್ ಕಾರ್ಪೆಟ್ ಮೇಲೆ ವಿಶ್ವ ತಾರೆಯರು ಫೋಟೋಗೆ ಪೋಸ್ ನೀಡುವ ಸಮಯದಲ್ಲಿ, ಯುವತಿಯೊಬ್ಬಳು ತನ್ನ ಮೈಮೇಲಿದ್ದ ಬಟ್ಟೆಯನ್ನು ಕಿತ್ತೆಸೆದು ಅರೆಬೆತ್ತಲೆಯಾಗಿ ಚೀರಾಡಿದ್ದಾಳೆ. ಆಕೆ ಉಕ್ರೇನಿಯನ್ ಮಹಿಳೆಯಾಗಿದ್ದು, ರಷ್ಯಾದ ಸೈನಿಕರು ತಮ್ಮ ದೇಶದಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ, ಅವರನ್ನು ನಿಲ್ಲಿಸಿ ಎಂದು ಜೋರಾಗಿ ಕೂಗಿ ಹೇಳಿದ್ದಾಳೆ. ಯುವತಿ ವರ್ತನೆಯಿಂದ ಕೆಲ ಸಮಯ ರೆಡ್‌ ಕಾರ್ಪೆಟ್‌ನಲ್ಲಿ ಗೊಂದಲ ವಾತಾವರಣ ಸೃಷ್ಟಿಯಾಗಿತ್ತು.

ತಕ್ಷಣ ಅಲ್ಲಿದ್ದ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಆಕೆಗೆ ವಸ್ತ್ರ ಹೊದಿಸಿ ವಶಕ್ಕೆ ಪಡೆದಿದ್ದಾರೆ. ಆ ಯುವತಿ ತನ್ನ ದೇಹದ ಮೇಲೆ ಉಕ್ರೇನಿಯನ್ ಧ್ವಜ ರಚಿಸಿಕೊಂಡು, “ನಮ್ಮನ್ನು ಅತ್ಯಾಚಾರ ಮಾಡುವುದನ್ನು ನಿಲ್ಲಿಸಿ” ಎಂದು ಘೋಷಣೆ ಕೂಗಿದ ಘಟನೆ ಪ್ರಪಂಚದಾದ್ಯಂತ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!