Wednesday, October 5, 2022

Latest Posts

ಉಮೇಶ್ ಕತ್ತಿ ನಿಧನ: ಸಚಿವ ಶಿವರಾಮ ಹೆಬ್ಬಾರ್ ಸಂತಾಪ

ಹೊಸದಿಗಂತ ವರದಿ, ಯಲ್ಲಾಪುರ:
ಸಂಪುಟ ಸಹೋದ್ಯೋಗಿ, ಅರಣ್ಯ, ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಅವರ ಅಕಾಲಿಕ ನಿಧನ ತೀವ್ರ ಆಘಾತ ತರಿಸಿದೆ. ಉತ್ತರ ಕರ್ನಾಟಕ ಗಟ್ಟಿ ಧ್ವನಿಯಾಗಿದ್ದ ಉಮೇಶ್ ಕತ್ತಿ ಅವರು ರಾಜ್ಯದಲ್ಲಿಯೇ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ರೈತ ವರ್ಗದ ಅಭಿವೃದ್ಧಿ ಶ್ರಮಿಸಿದರು ಶ್ರೀಯುತರ ನಿಧನದಿಂದ ರಾಜ್ಯ ಓರ್ವ ಮುತ್ಸದ್ಧಿ ಜನನಾಯಕನನ್ನು ಕಳೆದುಕೊಂಡಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಶೋಕ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ತಮ್ಮದೇ ಆದ ಕನಸು ಮತ್ತು ಕಾಳಜಿ ಹೊಂದಿದ್ದ ಸಂಪುಟ ಸಹೋದ್ಯೋಗಿ ಉಮೇಶ್ ಕತ್ತಿ ಅವರ ನಿಧನದಿಂದ ರಾಜ್ಯ ರಾಜಕಾರಣಕ್ಕೆ ಅಪಾರ ನಷ್ಟವಾಗಿದೆ.
ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಿ ಕುಟುಂಬ ವರ್ಗದವರಿಗೆ ಹಾಗೂ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ, ಅಗಲಿಕೆಯು ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!