Saturday, March 25, 2023

Latest Posts

ಉಮೇಶ್ ಪಾಲ್ ಕೊಲೆ ಪ್ರಕರಣ: ಯುಪಿ ಪೊಲೀಸರಿಂದ ಆರೋಪಿ ಆತೀಖ್ ಸಹವರ್ತಿಗಳ ಮನೆ ನೆಲಸಮ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಉತ್ತರ ಪ್ರದೇಶದ ಪೊಲೀಸರು ಮತ್ತೆ ಆಕ್ಷನ್ ಗೆ ಇಳಿದಿದ್ದು, ಉಮೇಶ್ ಪಾಲ್ ಕೊಲೆ (Umesh Pal Murder) ಪ್ರಕರಣದ ಪ್ರಮುಖ ಆರೋಪಿ ಅತೀಖ್ ಅಹ್ಮದ್ ಅವರ ಸಹವರ್ತಿಗಳ ಮನೆಗಳನ್ನು ಪ್ರಯಾಗ್‌ರಾಜ್ ಪೊಲೀಸರು ಜೆಸಿಬಿ ಬಳಸಿ ನೆಲಸಮ ಮಾಡಿದ್ದಾರೆ.

ಸಮಾಜವಾದಿ ಪಕ್ಷದ ಮಾಜಿ ನಾಯಕನಾಗಿರುವ ಆತೀಕ್ ಸದ್ಯ ಗುಜರಾತ್‌ನ ಅಹ್ಮದಾಬಾದ್‌ ಜೈಲಿನಲ್ಲಿದ್ದಾನೆ. ಇದಕ್ಕೆ ನೆರವು ನೀಡಿದ್ದ ಜಾಫರ್ ಅಹ್ಮದ್ ಜಾಫರ್ ಮನೆಯನ್ನು ನೆಲಸಮ ಮಾಡಿದ್ದಾರೆ.

ಉಮೇಶ್ ಪಾಲ್ ಮರ್ಡರ್ ಪ್ರಕರಣದ ಪ್ರಮುಖ ಆರೋಪಿ ಆತೀಖ್ ಅಹ್ಮದ್‌ನ ಸುಮಾರು 20 ಸಹವರ್ತಿಗಳನ್ನು ಪ್ರಯಾಗ್‌ರಾಜ್ ಡೆವಲಪ್‌ಮೆಂಟ್ ಪ್ರಾಧಿಕಾರ(ಪಿಡಿಎ) ಫೆ.28ರಂದು ಗುರುತಿಸಿತ್ತು. ಈ ವಿಷಯವನ್ನು ಖಚಿತಪಡಿಸಿದ್ದ ಅವರು ತಮ್ಮ ಆಸ್ತಿಗಳನ್ನು ನೆಲಸಮ ಮಾಡಲಾಗುತ್ತದೆ ಎಂದು ಹೇಳಿದ್ದರೆ. ಎಣಿಕೆಯಂತೆ ಆತೀಕ್ ಅಹ್ಮದ್ ಮನೆಯ ಬಳಿಯೇ ಇರುವ ಜಾಫರ್ ಅಹ್ಮದ್ ಮನೆಯನ್ನು ಪೊಲೀಸರು ಉರುಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!