ಕರಾಚಿಯಲ್ಲಿ ಭೂಗತ ಪಾತಕಿ ದಾವೂದ್​ ಇಬ್ರಾಹಿಂ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸೋದರಳಿಯ!

ಹೊಸದಿಗಂತ ಜಿಜಿಟಲ್‌ ಡೆಸ್ಕ್‌:

ಜಾರಿ ನಿರ್ದೇಶನಾಲಯಕ್ಕೆ(ಇಡಿ) ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಇಡಿಗೆ ದಾವೂದ್​ ಇಬ್ರಾಹಿಂ​ ಪಾಕಿಸ್ತಾನದ ಕರಾಚಿಯಲ್ಲೇ ನೆಲೆಸಿದ್ದಾನೆ ಎಂಬ ಸುಳಿವು ದೊರೆತಿದೆ.
ಈ ಸ್ಫೋಟಕ ಮಾಹಿತಿಯನ್ನು ಸ್ವತಃ ದಾವೂದ್​​ನ ಸೋದರಳಿಯ ಆಲಿಶಾ ಪಾರ್ಕರ್​ ನೀಡಿದ್ದಾನೆ. ಈ ಆಲಿಶಾ ಪಾರ್ಕರ್​ ದಾವೂದ್​ನ ಸಹೋದರಿ​​ ಹಸೀನಾ ಪಾರ್ಕರ್​ನ ಮಗನಾಗಿದ್ದು, ಈತನನ್ನು ಅನೇಕ ಬಾರಿ ಜಾರಿ ನಿರ್ದೇಶನಾಲಯವು ವಿಚಾರಣೆಗೆ ಒಳಪಡಿಸಿದೆ.
​ಪಾಕಿಸ್ತಾನದ ಕರಾಚಿಯಲ್ಲಿ ದಾವೂದ್ ಇದ್ದಾನೆ. ನಾನು ಹುಟ್ಟುವ ಮುನ್ನವೇ ಆತ ಮುಂಬೈ ತೊರೆದಿದ್ದಾನೆ ಎಂದು ಸೋದರಳಿಯ ತಿಳಿಸಿದ್ದಾನೆ. ಜೊತೆಗೆ ಮುಂಬೈನ ಡಂಬರ್ವಾಲಾ ಭವನದಲ್ಲಿ 1986ರವರೆಗೆ ಆತ ವಾಸವಿದ್ದ. ಪಾಕಿಸ್ತಾನದಲ್ಲಿ ಆತ ಇದ್ದಾನೆ ಎಂದು ನಾನು ಅನೇಕ ಬಾರಿ ನಮ್ಮ ಸಂಬಂಧಿಕರ ಬಾಯಿಯಿಂದ ಕೇಳಿದ್ದೇನೆ ಎಂದು ಹೇಳಿದ್ದಾನೆ.
ಈದ್​ ಮತ್ತು ಇತರ ಹಬ್ಬದ ದಿನಗಳಲ್ಲಿ ದಾವೂದ್​ ಪತ್ನಿ ಮೆಹಜಾಬೀನ್​ ನಮ್ಮ ಸಂಪರ್ಕಕ್ಕೆ ಬರುತ್ತಿದ್ದರು. ನನ್ನ ಪತ್ನಿ ಆಯೇಷಾ ಹಾಗೂ ನನ್ನ ಸಹೋದರಿಯರೊಂದಿಗೆ ಸಂಕರ್ಪದಲ್ಲಿ ಇದ್ದರು ಎಂದೂ ಆಲಿಶಾ ಪಾರ್ಕರ್ ಬಾಯ್ಬಿಟ್ಟಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!