January19, 2026
Monday, January 19, 2026
spot_img

ಲಕ್ನೋದಲ್ಲಿ ಎಲೆಕ್ಟ್ರಿಕ್ ಬಸ್ ಉತ್ಪಾದನಾ ಘಟಕ ಲೋಕಾರ್ಪಣೆಗೊಳಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಲಕ್ನೋ ನಗರದಲ್ಲಿ ಅಶೋಕ್ ಲೇ ಲ್ಯಾಂಡ್‌ನ ಎಲೆಕ್ಟ್ರಿಕ್ ಬಸ್ ಉತ್ಪಾದನಾ ಘಟಕವನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಶುಕ್ರವಾರ ಲೋಕಾರ್ಪಣೆ ಮಾಡಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಶರ್ಮ ಅವರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಪರಿಕಲ್ಪನೆಯನ್ನು ಬಲಪಡಿಸುತ್ತದೆ. ಸ್ವಚ್ಛ, ಸುಸ್ಥಿರ ಚಲನಶೀಲತೆಯತ್ತ ಭಾರತದ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಾವು FAME-II (11,500 ಕೋಟಿ ರೂ.), PM E-DRIVE (10,900 ಕೋಟಿ ರೂ.) ಮತ್ತು PLI ಆಟೋ ಮತ್ತು ACC ಉಪಕ್ರಮಗಳಂತಹ ಪ್ರಮುಖ ಯೋಜನೆಗಳ ಮೂಲಕ EV ಅಳವಡಿಕೆಯನ್ನು ವೇಗಗೊಳಿಸುತ್ತಿದ್ದೇವೆ. ಹೊಸದಾಗಿ ಅನುಮೋದಿಸಲಾದ REPM ಯೋಜನೆ (7,280 ಕೋಟಿ ರೂ.) ಮೂಲಕ EV ಕ್ಷೇತ್ರದ ಬೆಳವಣಿಗೆ ಮತ್ತು ರಕ್ಷಣೆಗಾಗಿ ಸ್ಥಳೀಯ ಘಟಕಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.

Must Read