ಒಗ್ಗಟ್ಟಿನಿಂದ ಸಾಮರಸ್ಯ ಜೀವನ ಸಾಧ್ಯ: ಲೋಕೇಶ್ವರಿ

ದಿಗಂತ ವರದಿ ಸೋಮವಾರಪೇಟೆ:

ಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನಿಂದ ಸಾಮರಸ್ಯ ಜೀವನ ಸಾಧ್ಯವೆಂದು ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಕಿಬ್ಬೆಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಪಟ್ಟಣಗಳಿಂದ ಹೊರಗಿರುವ ಗ್ರಾಮಗಳಲ್ಲಿ ಜನತೆ ಪರಸ್ಪರ ಸಹಕರಿಸುವ ಮನೋಭಾವನೆಯೊಂದಿಗೆ ಒಗ್ಗಟ್ಟಿನಿಂದ ಇರುವುದರಿಂದ ಸಾಮರಸ್ಯದ ಜೀವನ ನಡೆಸಲು ಸಹಕಾರಿಯಾಗುತದೆ ಎಂದರು.
ಯಾವುದೇ ಗ್ರಾಮಗಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬಾರದು ಎಂದೂ‌ ಅವರು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮ ಸಮಿತಿ ಗೌರವಾದ್ಯಕ್ಷ ಮಾದಪ್ಪ, ಅಧ್ಯಕ್ಷ ಹೆಚ್.ಡಿ.ಮಧು,ಉಪಾಧ್ಯಕ್ಷ ಕಿರಣ್, ಕಾರ್ಯದರ್ಶಿ ಗಿರೀಶ್, ಗ್ರಾಮದ ಹಿರಿಯರಾದ ಶೇಷಪ್ಪ, ಗಣೇಶ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!