ಪೊಲೀಸ್‌ ಠಾಣೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಲು ಹೊರಟಿದ್ದ ಎಳೆ ಹುಡುಗಿ ಧ್ವಜ ಹಿಡಿದೇ ಹುತಾತ್ಮಳಾದಳು…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ( (ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವಿಶೇಷ)
ಸ್ವಾತಂತ್ರ್ಯ ಹೋರಾಟಗಾರ್ತಿ ಕನಕಲತಾ ಬರುವಾ ಅವರು ಅಸ್ಸಾಂನ ಬರಂಗಾಬರಿಯಲ್ಲಿ 1924 ರಲ್ಲಿ ಜನಿಸಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಬರುವಾ ಮನ ಸದಾ ತುಡಿಯುತ್ತಿತ್ತು. ಅಕೆ ಅನೇಕಾ ಸ್ವಾತಂತ್ರ್ಯ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಸೆಪ್ಟೆಂಬರ್ 20, 1942 ರಂದು ಸ್ವಾತಂತ್ರ್ಯಕ್ಕೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ಹೋರಾಟಗಾರರ ಗುಂಪಿನೊಡನೆ ಆಕೆ ಚಳವಳಿಯಲ್ಲಿ ಭಾಗಿಯಾಗಿದ್ದರು. ಕ್ವಿಟ್ ಇಂಡಿಯಾ ಚಳುವಳಿಯನ್ನು ಬೆಂಬಲಿಸಲು ಗೋಹಪುರ್ ಪೊಲೀಸ್ ಠಾಣೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಲು ಯೋಜಿಸಿದ್ದ ಗುಂಪು ಠಾಣೆಯತ್ತ ಮೆರವಣಿಗೆ ನಡೆಸಿತ್ತು.
ಬ್ರಿಟೀಷರ ಎಂಜಲು ಕಾಸಿನ ಆಸೆಗೆ ಸ್ವತಃ ಭಾರತೀಯರಾಗಿದ್ದೂ ಭಾರತೀಯರಿಗೆ ದ್ರೋಹ ಬಗೆಯುತ್ತಿದ್ದ ಪೊಲೀಸರು ಈ ತಂಡದ ಧೈರ್ಯಶಾಲಿ ನಡೆಗೆ ಬೆದರಿದರು. ಈ ಗುಂಪು ಠಾಣೆಯತ್ತ ಬರುತ್ತಲೇ ಗುಂಪಿನ ಮೇಲೆ ಮನಬಂದಂತೆ ಗುಂಡು ಹಾರಿಸಿದರು. ಕನಕಲತಾ ಬರುವಾ ಅತ್ಯಂತ ಚಿಕ್ಕ ವಯಸ್ಸಿನಲ್ಲಿನಲ್ಲಿ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡೇ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದರು. ಅಲ್ಲಿಗೆ  ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದ್ದ ಎಳೆಯ ಪುಷ್ಪವೊಂದು ಭಾರತ ಮಾತೆಯ ಮುಡಿ ಸೇರಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!