ಬ್ರಿಟಿಷರ ವಿರುದ್ಧ ದಂಗೆಗೆ ಹಣ ಸಂಗ್ರಹಿಸಲು ದರೋಡೆಯಲ್ಲಿ ತೊಡಗಿದ್ದಾಗ ಮೃತಪಟ್ಟಿದ್ದರು ವಾರಿಯಮ್ ಸಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್‌
ವಾರಿಯಮ್ ಸಿಂಗ್ 1909-10ರಲ್ಲಿ ಪಂಜಾಬ್ ನ ಪಟಿಯಾಲ ರಾಜ್ಯದ ದೂರದ ಹಳ್ಳಿಯಿಂದ ಶಾಂಘೈಗೆ ವಲಸೆ ಹೋದವರು. ಅವರು ಸೆಪ್ಟೆಂಬರ್ 1914 ರಲ್ಲಿ ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ ಭಾರತಕ್ಕೆ ಮರಳಿದರು. ಗದರ್ ಪಕ್ಷವು ಬ್ರಿಟಿಷ್ ಆಳ್ವಿಕೆಯನ್ನು ಉರುಳಿಸಲು ದಂಗೆಯನ್ನು ಪ್ರಯತ್ನಿಸಿತು.
ಹಣಕಾಸಿನ ಅಡಚಣೆಯಿಂದಾಗಿ, ಪಕ್ಷವು ಸರ್ಕಾರಿ ಅಧಿಕಾರಿಗಳು ಮತ್ತು ಬ್ರಿಟಿಷ್ ಪರ ಲೇವಾದೇವಿಗಾರರನ್ನು ಬೆದರಿಸಿ ನಿಧಿ ಸಂಗ್ರಹಿಸಲು ನಿರ್ಧರಿಸಿತು. 2 ಫೆಬ್ರವರಿ 1915 ರ ರಾತ್ರಿ ಅಮೃತಸರ ಜಿಲ್ಲೆಯ ಚಬ್ಬಾ ಗ್ರಾಮದ ಬೇಲಿ ರಾಮ್ ಎಂಬ ಕುಖ್ಯಾತ ಲೇವಾದೇವಿಗಾರನ ಮನೆಯಲ್ಲಿ ಪಿಸ್ತೂಲುಗಳು, ಬಾಂಬ್‌ಗಳು ಮತ್ತು ವಿವಿಧ ಆಯುಧಗಳೊಂದಿಗೆ ಹೋದ ಶಸ್ತ್ರಸಜ್ಜಿತವಾದ ಗಡಾರೈಟ್‌ಗಳ ಗುಂಪು ದರೋಡೆ ನಡೆಸಿತು.
ಗದರ್ವಾದಿಗಳು ಲೇವಾದೇವಿಗಾರನ ಮನೆಯ ಬಾಗಿಲನ್ನು ಬಲವಂತವಾಗಿ ತೆರೆದರು. ಇವರ ದಾಳಿಗೆ ಲೇವಾದೇವಿಗಾರ ಭಯಭೀತನಾದ. ಅವರು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾದರು ಮತ್ತು ಬ್ರಿಟೀಷರ ಹಲವು ಬಾಂಡ್ಗಳನ್ನು ಸುಟ್ಟುಹಾಕಿದರು. ಆದರೆ ಅವರು ಹೋಗುವಾಗ ಅವರೆಲ್ಲ ದರೋಡೆಕೋರರು ಎಂದು ಭಾವಿಸಿದ ಗ್ರಾಮಸ್ಥರು ಬೆನ್ನಟ್ಟಿದ್ದರು. ಈ ವೇಳೆ ಎರಡೂ ಕಡೆ ಗಂಭೀರ ಹೋರಾಟ ನಡೆಯಿತು. ಎರಡೂ ಕಡೆಯಿಂದ ಹಲವಾರು ಸಾವುನೋವುಗಳು ಸಂಭವಿಸಿದವು. ರಾಮ್ ರಖಾ, ವಾರ್ಯಮ್ ಸಿಂಗ್ ಮತ್ತು ಬೀರ್ ಸಿಂಗ್ ಬಹೋವಲ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡರು. ಈ ರಾಷ್ಟ್ರೀಯವಾದಿ ಡಕಾಯಿತಿಯಲ್ಲಿ, ವಾರ್ಯಮ್ ಸಿಂಗ್ ಗಂಭೀರವಾಗಿ ಗಾಯಗೊಂಡರು ಮತ್ತು ಫೆಬ್ರವರಿ 1, 1915 ರಂದು ಹುತಾತ್ಮರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!