ಲೂಡೋ ದಲ್ಲಿ ತನ್ನನ್ನು ತಾನೇ ಪಣಕ್ಕಿಟ್ಟು ಸೋತು ಮನೆ ಮಾಲೀಕನ ಮನೆ ಸೇರಿದ ಮಹಿಳೆ: ಕಂಗಾಲಾದ ಪತಿ ಪೊಲೀಸರಿಗೆ ಮೊರೆ!

ಹೊಸದಿಂಗತ ಡಿಜಿಟಲ್‌ ಡೆಸ್ಕ್‌
ಬೆಟ್ಟಿಂಗ್ ಚಟಕ್ಕೆ ಬಿದ್ದು ತಮ್ಮ ಸರ್ವಸ್ವವನ್ನೂ ಕಳೆದುಕೊಂಡವರ ಬಗ್ಗೆ ಕೇಳಿರುತ್ತೀರಿ. ಆದರೆ, ಉತ್ತರ ಪ್ರದೇಶದ ಲುಡೋ ಚಟಕ್ಕೆ ವ್ಯಸನಿಯಾಗಿದ್ದ ಮಹಿಳೆಯೊಬ್ಬಳ ವಿಲಕ್ಷಣ ಕಥೆ ಕೇಳಿದರೆ ಹೀಗೂ  ನಡೆಯಬಹುದಾ ಎಂದು ಹುಬ್ಬೇರಿಸುತ್ತೀರಿ.
ಉತ್ತರ ಪ್ರದೇಶದ ರೇಣು ಎಂಬ ಮಹಿಳೆ ಅತಿಯಾಗಿ ಲೂಡೋ ಗೇಮ್‌ ಆಡಿ ಬೆಟ್ಟಿಂಗ್‌ ಕಟ್ಟುವ ವ್ಯಸನಿಯಾಗಿದ್ದಳು. ರಾಜಸ್ಥಾನದ ಜೈಪುರದಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ಪತಿ ಕಳುಹಿಸುತ್ತಿದ್ದ ಹಣವನ್ನೆಲ್ಲಾ ಆಕೆ ಜೂಜಾಡಲು ಬಳಸುತ್ತಿದ್ದಳು. ರೇಣು ತನ್ನ ಮನೆಯ ಮಾಲೀಕ ಹಾಗೂ ಜಮೀನ್ದಾರನಾಗಿದ್ದ ವ್ಯಕ್ತಿಯೊಂದಿಗೆ ನಿಯಮಿತವಾಗಿ ಲುಡೋ ಆಡುತ್ತಿದ್ದಳು.
ಜಮೀನುದಾರನೊಂದಿಗಿನ ಅಂತಹ ಒಂದು ಆಟದಲ್ಲಿ, ಪತಿ ಕೊಟ್ಟ ಹಣವೆಲ್ಲ ಖಾಲಿಯಾದಾಗ ರೇಣು ತನ್ನನ್ನೇ ತಾನು ಆಟಕ್ಕೆ ಪಣಕ್ಕಿಟ್ಟಿದ್ದಾಳೆ. ಚಾಲಾಕಿ ಜಮೀನ್ದಾರ ಈ ಆಟವನ್ನೂ ಸುಲಭವಾಗಿ ಗೆದ್ದಿದ್ದಾನೆ. ಸೋತ ರೇಣು ಜಮೀನುದಾರನಿಗೆ ಸೇರಿದ್ದಾಳೆ. ಆ ಬಳಿಕ ಜಮೀನುದಾರನ ಜೊತೆಗೆ ವಾಸಿಸಲು ಪ್ರಾರಂಭಿಸಿದ್ದಾಳೆ.
ನಂತರ ಆಕೆ ತನ್ನ ಪತಿಗೆ ಈ ಘಟನೆಯನ್ನು ತಿಳಿಸಿದ್ದು, ವಿಚಾರ ಕೇಳಿ ಕಂಗಾಲಾದ ಪತಿ ಪ್ರತಾಪಗಢಕ್ಕೆ ಓಡಿ ಬಂದು ಪತ್ನಿಯ ಮನವೊಲಿಸಲು ಯತ್ನಿಸಿದ್ದಾಳೆ. ಆಕೆ ಒಪ್ಪದಿದ್ದಾಗ ಪೊಲೀಸರ ಮೊರೆ ಹೋಗಿದ್ದಾನೆ. “ನಾನು ಅವಳನ್ನು ಬಿಟ್ಟು ಹೋಗುವಂತೆ ಮಾಡಲು ಪ್ರಯತ್ನಿಸಿದೆ, ಆದರೆ ಅವಳು ಅದಕ್ಕೆ ತಾನು ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎನ್ನುತ್ತಿದ್ದಾಳೆ” ಎಂದು ಗೋಳು ತೋಡಿಕೊಂಡಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!