6 ತಿಂಗಳೊಳಗೆ ಗ್ರೀನ್‌ ಕಾರ್ಡ್‌ ಅರ್ಜಿಗಳ ತ್ವರಿತ ವಿಲೇವಾರಿಗೆ ಅಧ್ಯಕ್ಷೀಯ ಮಂಡಳಿ ಶಿಫಾರಸು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕಾದಲ್ಲಿ ಶಾಶ್ವತ ವಾಸ ಹಾಗೂ ಗ್ರೀನ್ ಕಾರ್ಡ್ ಅರ್ಜಿಗಳನ್ನು ಆರು ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಅಧ್ಯಕ್ಷೀಯ ಮಂಡಳಿ ಸರ್ವಾನುಮತದಿಂದ ಶಿಫಾರಸು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸದಸ್ಯರು ತಮ್ಮ ಪ್ರಸ್ತಾವನೆಗಳನ್ನು ಅಧ್ಯಕ್ಷ ಬಿಡೆನ್ ಅವರಿಗೆ ಕಳುಹಿಸಿದ್ದಾರೆ. ಆ ಪ್ರಸ್ತಾವನೆಗಳಿಗೆ ಬಿಡೆನ್ ಒಪ್ಪಿಗೆ ನೀಡಿದರೆ ಸಾವಿರಾರು ಭಾರತೀಯರು ಗ್ರೀನ್ ಕಾರ್ಡ್ ಪಡೆಯುವ ಸಾಧ್ಯತೆ ಇದೆ.

ಏಷ್ಯನ್ ಅಮೆರಿಕನ್ನರು, ಸ್ಥಳೀಯ ಹವಾಯಿಗಳು ಮತ್ತು ಪೆಸಿಫಿಕ್ ದ್ವೀಪವಾಸಿಗಳ ಕುರಿತು ಸಲಹಾ ಆಯೋಗ ಮಾಡಿದ ಪ್ರಸ್ತಾವನೆಗಳನ್ನು ಅನುಮೋದನೆಗಾಗಿ ಶ್ವೇತಭವನಕ್ಕೆ ಕಳುಹಿಸಲಾಗುತ್ತದೆ. ಇವುಗಳಿಗೆ ಸರ್ಕಾರ ಅನುಮೋದನೆ ನೀಡಿದರೆ ದಶಕಗಳಿಂದ ಕಾಯುತ್ತಿರುವವರಿಗೆ ಗ್ರೀನ್ ಕಾರ್ಡ್ ಸಿಗಲಿದೆ. ಭಾರತೀಯ ಅಮೆರಿಕನ್ ನಾಯಕ ಅಜಯ್ ಜೈನ್ ಭುಟೋರಿಯಾ ನೇತೃತ್ವದ ತಂಡವು ಈ ಪ್ರಸ್ತಾಪವನ್ನು ಮಾಡಿದ್ದು,  ಪ್ರಸ್ತಾವನೆಗೆ 25 ಆಯುಕ್ತರು ಸರ್ವಾನುಮತದಿಂದ ಅನುಮೋದಿಸಿದ್ದಾರೆ.

2021ರಲ್ಲಿ 65,452 ಜನರಿಗೆ ಮಾತ್ರ ಗ್ರೀನ್ ಕಾರ್ಡ್ ನೀಡಲಾಗಿದೆ. ಗ್ರೀನ್ ಕಾರ್ಡ್ ಸಂದರ್ಶನಗಳನ್ನು ತ್ವರಿತಗೊಳಿಸಲು ಅಗತ್ಯವಿದ್ದರೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಿ ಮತ್ತು ಮೂರು ತಿಂಗಳೊಳಗೆ ಪ್ರತಿಶತ 100 ಸಂದರ್ಶನಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ. ಈ ವರ್ಷದ ಏಪ್ರಿಲ್‌ವರೆಗೆ ಇರುವ ಪ್ರಸ್ತುತ ಸಾಮರ್ಥ್ಯವನ್ನು ಮುಂದಿನ ವರ್ಷ ಮೇ ವೇಳೆಗೆ ಶೇ.150ಕ್ಕೆ ಹೆಚ್ಚಿಸಲು ಮುಂದಾಗಿದೆ. US ಪೌರತ್ವ ಮತ್ತು ಕೆಲಸದ ಪರವಾನಿಗೆಗಳು ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಸಲಹಾ ಆಯೋಗವು ಹಲವಾರು ಶಿಫಾರಸುಗಳನ್ನು ಮಾಡಿದೆ. ಕೆಲಸದ ಪರವಾನಗಿ, ಪ್ರಯಾಣ ದಾಖಲೆಗಳ ತಾತ್ಕಾಲಿಕ ವಿಸ್ತರಣೆ ಹಾಗೂ ಇತರ ಬದಲಾವಣೆಗಳನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಲು ಶಿಫಾರಸು ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!