ವಾಟ್ಸಾಪ್ ಬಳಕೆ ಇನ್ನೂ ಸುಲಭ, ಸದ್ಯದಲ್ಲೇ ಲಾಂಚ್ ಆಗಲಿವೆ 5 ಹೊಸ ಫೀಚರ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಇದೀಗ 5 ಹೊಸ ಫೀಚರ‍್ಸ್‌ಗಳನ್ನು ಪರಿಚಯಿಸುತ್ತಿದೆ. ಇದರಿಂದ ವಾಟ್ಸಾಪ್ ಬಳಕೆ ಇನ್ನಷ್ಟು ಸುಲಭ ಹಾಗೂ ಇಂಟ್ರೆಸ್ಟಿಂಗ್ ಆಗಲಿದೆ.

  • ಒಮ್ಮೆ ಕಳಿಸಿದ ಮೆಸೇಜ್‌ನ್ನು ತಿದ್ದಬೇಕು ಎಂದರೆ ಅದನ್ನು ಡಿಲೀಟ್ ಮಾಡಿ ಹೊಸ ಮೆಸೇಜ್ ಕಳಿಸಬೇಕು. ಆದರೆ ಈಗ ಹೊಸ ಫೀಚರ್‌ನಲ್ಲಿ ಕಳಿಸಿದ ಮೆಸೇಜ್ ತಿದ್ದಬೇಕಾದರೆ ಎಡಿಟ್ ಮಾಡಬಹುದು.
  • ಇದೀಗ ಒಂದು ಗ್ರೂಪ್‌ನಲ್ಲಿ 256 ಜನ ಇರಲು ಮಾತ್ರ ಅವಕಾಶ ಇದೆ. ಈ ಸಂಖ್ಯೆಯನ್ನು 1024ಕ್ಕೆ ಏರಿಸಲು ನಿರ್ಧರಿಸಲಾಗಿದೆ.
  • ಫೋಟೊ ಕಳಿಸುವಾಗ ಕೆಳಗೆ ಕ್ಯಾಪ್ಷನ್ ಹಾಕುವ ವ್ಯವಸ್ಥೆ ಇದೆ. ಅದೇ ರೀತಿ ಡಾಕ್ಯುಮೆಂಟ್‌ಗೂ ಮಾಡಲಾಗುತ್ತಿದೆ.
  • ಯಾವುದಾದರೂ ಫೋಟೊವನ್ನು ಒಂದು ಬಾರಿ ನೋಡುವಂತೆ ಸೆಟ್ ಮಾಡಿದರೆ ಅದನ್ನು ಒಂದು ಬಾರಿ ನೋಡಲು ಅಷ್ಟೇ ಅವಕಾಶ ಇತ್ತು. ಅದು ಮೆಮೊರಿಯಲ್ಲಿ ಸೇವ್ ಆಗುವುದಿಲ್ಲ. ಆದರೆ ಅದನ್ನು ಸ್ಕ್ರೀನ್‌ಶಾಟ್ ತೆಗೆಯಬಹುದಾಗಿತ್ತು. ಆದರೆ ಇದೀಗ ಸ್ಕ್ರೀನ್‌ಶಾಟ್ ಮೇಲೆ ನಿರ್ಬಂಧ ಹೇರಲಾಗುತ್ತದೆ.
  • ವಾಟ್ಸಾಪ್ ಬ್ಯುಸಿನೆಸ್ ಪ್ರೀಮಿಯಂ ಸದ್ಯದಲ್ಲೇ ಸಿಗಲಿದೆ. ಪ್ರೀಮಿಯಂ ಚಂದಾದಾರರಿಗೆ ವಿಶಿಷ್ಟ ಸೌಲಭ್ಯಗಳನ್ನು ನೀಡಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!