ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಕಾಶಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದಿದ್ದು, 40 ಕಾರ್ಮಿಕರು ಒಳಗೆ ಸಿಲುಕಿದ್ದಾರೆ. ಇಂದು ಕೂಡ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಕಾರ್ಮಿಕರ ರಕ್ಷಿಸುವ ಸಾಧ್ಯತೆ ಇದೆ.
ಚಾರ್ ಧಾಮ್ ಮಾರ್ಗದ ನಿರ್ಮಾಣ ಹಂತದ ಸುರಂಗದಲ್ಲಿ 40 ಕಾರ್ಮಿಕರ ಕಾಯುವಿಕೆ ಮುಂದುವರಿದಿದ್ದು, ಇಂದು ಆರನೇ ದಿನದ ಕಾರ್ಯಾಚರಣೆ ಆರಂಭವಾಗಿದೆ. ಮಂಗಳವಾರ ಭೂಕುಸಿತವಾದ ಕಾರಣ ಕಾರ್ಯಾಚರಣೆ ವಿಳಂಬವಾಗಿತ್ತು.
ದೆಹಲಿಯಿಂದ ಹೊಸ ಯಂತ್ರಗಳ ಆಗಮಿಸಿದ್ದು, ಕಾರ್ಮಿಕರ ರಕ್ಷಣೆಗೆ ಇನ್ನೂ 2-3 ದಿನಗಳು ಬೇಕಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಕಾರ್ಮಿಕರ ಆರೋಗ್ಯ ಸ್ಥಿರವಾಗಿದೆ.
ಪೈಪ್ ಮೂಲಕ ಆಮ್ಲಜನಕ, ಆಹಾರ, ನೀರು, ವಿದ್ಯುತ್ ಹಾಗೂ ಔಷಧವನ್ನು ಸರಬರಾಜು ಮಾಡಲಾಗುತ್ತಿದೆ. ನ.12 ರಿಂದ ಕಾರ್ಮಿಕರು ಸುರಂಗದೊಳಗೆ ಸಿಲುಕಿದ್ದಾರೆ.