CINE| ಮತ್ತೊಮ್ಮೆ ನಟ ವರುಣ್-ಲಾವಣ್ಯ ತ್ರಿಪಾಠಿ ಆರತಕ್ಷತೆ: ಈ ಬಾರಿ ಎಲ್ಲಿ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೆಗಾ ಹೀರೋ ವರುಣ್ ತೇಜ್ ಮತ್ತು ನಾಯಕಿ ಲಾವಣ್ಯ ತ್ರಿಪಾಠಿ ಇತ್ತೀಚೆಗಷ್ಟೇ ಇಟಲಿಯಲ್ಲಿ ಅದ್ದೂರಿಯಾಗು ಹಸೆಮಣೆ ಏರಿದರು.  ಮೆಗಾ ಫ್ಯಾಮಿಲಿ, ಅಲ್ಲು ಫ್ಯಾಮಿಲಿ, ಚಿರಂಜೀವಿ ಆಪ್ತರು, ಲಾವಣ್ಯ ಫ್ಯಾಮಿಲಿ ಹೀಗೆ ಹಲವು ಆಪ್ತ ಸ್ನೇಹಿತರ ನಡುವೆ ಮದುವೆ ಸಂಭ್ರಮ ಸಡಗರಿದಂದ ನಡೆದಿದೆ. ಮದುವೆ ಬಳಿ ಹೈದರಾಬಾದ್‌ನಲ್ಲಿ ಆರತಕ್ಷತೆಯೂ ನಡೆಯಿತು. ಇದೀಗ ಮತ್ತೊಂದು ಆರತಕ್ಷತೆಗೆ ಈ ಜೋಡಿ ತಯಾರಾಗುತ್ತಿದೆ ಎಂಬ ಸುದ್ದಿ ಟಾಲಿವುಡ್‌ ಅಂಗಳದಲ್ಲಿ ಓಡಾಡುತ್ತಿದೆ.

ಈ ಬಾರಿ ಲಾವಣ್ಯ ತ್ರಿಪಾಠಿ ಮನೆಯಲ್ಲಿ ಅವರ ಸಂಬಂಧಿಕರ ನಡುವೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದುಬಂದಿದೆ. ಲಾವಣ್ಯ ತ್ರಿಪಾಠಿ ಅಯೋಧ್ಯೆಯ ಬಳಿಯ ಊರಿನವರಾದರೂ, ಅವರ ಕುಟುಂಬ ಪ್ರಸ್ತುತ ಡೆಹ್ರಾಡೂನ್‌ನಲ್ಲಿ ನೆಲೆಸಿದೆ. ಹಾಗಾಗಿಯೇ ಮತ್ತೊಮ್ಮೆ ಡೆಹ್ರಾಡೂನ್ ನಲ್ಲಿ ವರುಣ್ ಲಾವಣ್ಯ ಆರತಕ್ಷತೆ ನಡೆಯಲಿದೆ ಎಂದು ವರದಿಯಾಗಿದೆ. ವರುಣ್, ಲಾವಣ್ಯ ಮತ್ತು ನಿಹಾರಿಕಾ ಡೆಹ್ರಾಡೂನ್‌ಗೆ ಹೋಗುತ್ತಿದ್ದಾಗ ಹೈದರಾಬಾದ್ ಏರ್‌ಪೋರ್ಟ್‌ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕಿದ್ದರು.

ಈ ಕಾರ್ಯಕ್ರಮಕ್ಕೆ ಮೆಗಾ ಫ್ಯಾಮಿಲಿಯಲ್ಲಿ ಕೆಲವೇ ಮಂದಿ ಹೋಗಲಿದ್ದಾರೆ ಎಂದು ಗೊತ್ತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!