October 13, 2026
Tuesday, October 13, 2026
spot_img

ಬೆಂಗಳೂರಿನಲ್ಲಿ ವರುಣನ ಆರ್ಭಟ: ನಮ್ಮ ಮೆಟ್ರೋ ಸೇವೆಯಲ್ಲೂ ವ್ಯತ್ಯಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ವರುಣನ ಆರ್ಭಟ ಜೋರಾಗಿದ್ದು, ನಗರದ ಬಹುತೇಕ ರಸ್ತೆಗಳು ಕೆರೆಯಂತಾಗಿದ್ದು, ರಸ್ತೆಗಳ ಮೇಲೆ ನೀರು ಮೊಣಕಾಲುದ್ದ ಹರಿಯುತ್ತಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಆಟೋ ಚಾಲಕರು ತೀವ್ರ ಪರದಾಡುವಂತಾಗಿದೆ. ಇದರ ನಡುವೆ ರೈಲುಗಳನ್ನು ಕಾರ್ಯಾಚರಣೆಯಲ್ಲೂ ಅಡೆತಡೆಗಳು ಉಂಟಾಗಿದೆ.

ಮೆಟ್ರೋ ರೈಲು ಸೇವೆಗಳಲ್ಲಿ ವಿಳಂಬ

ಇತ್ತ ಭಾರೀ ಮಳೆಯಿಂದಾಗಿ ನಮ್ಮ ಮೆಟ್ರೋ ಸಂಚಾರದಲ್ಲೂ ಅಸ್ತವ್ಯಸ್ತಗೊಂಡಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ ವ್ಯಾಪ್ತಿಯ ಹಸಿರು ಮತ್ತು ನೇರಳೆ ಸೇರಿದಂತೆ ಎಲ್ಲಾ ಪ್ರಮುಖ ಮೆಟ್ರೋ ಮಾರ್ಗಗಳ ರೈಲು ಸೇವೆಗಳಲ್ಲಿ ವಿಳಂಬ ಉಂಟಾಗಿದೆ.

ನಮ್ಮ ಮೆಟ್ರೊಯಿಂದ ತುರ್ತು ಪ್ರಕಟಣೆ

ಈ ಕುರಿತು ತುರ್ತು ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್‌, ಭಾರೀ ಗಾಳಿ ಮಳೆಯಿಂದಾಗಿ ಮೆಟ್ರೋ ಮಾರ್ಗಗಳ ಸೇವೆಯಲ್ಲಿ ವಿಳಂಬ ಉಂಟಾಗಿದೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಈ ಅನಾನುಕೂಲತೆಗೆ ವಿಷಾಧಿಸುತ್ತೇವೆ ಎಂದು ತಿಳಿಸಿದೆ.

Must Read