June 9, 2026
Tuesday, June 9, 2026
spot_img

Vastu | ಭಾಗ್ಯ ಬದಲಿಸಲಿದೆ ನೀವು ಮಲಗುವ ದಿಕ್ಕು! ನೆಮ್ಮದಿಯ ನಿದ್ದೆಗಾಗಿ ಇರಲಿ ವಾಸ್ತು ಜ್ಞಾನ

ನಮ್ಮ ದೈನಂದಿನ ಜೀವನದಲ್ಲಿ ಉತ್ತಮ ನಿದ್ದೆಯು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಎಷ್ಟು ಮುಖ್ಯವೋ, ನಾವು ಮಲಗುವ ದಿಕ್ಕು ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ತಪ್ಪು ದಿಕ್ಕಿನಲ್ಲಿ ಮಲಗುವುದು ಕೇವಲ ಆರೋಗ್ಯದ ಮೇಲಷ್ಟೇ ಅಲ್ಲದೆ, ಮನೆಯ ಆರ್ಥಿಕ ಪರಿಸ್ಥಿತಿ ಮತ್ತು ಮಾನಸಿಕ ನೆಮ್ಮದಿಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಿದ್ದರೆ, ಶಾಸ್ತ್ರಗಳ ಪ್ರಕಾರ ಹಾಗೂ ವೈಜ್ಞಾನಿಕವಾಗಿ ಮಲಗಲು ಅತ್ಯುತ್ತಮವಾದ ದಿಕ್ಕು ಯಾವುದು ಗೊತ್ತಾ?

ದಕ್ಷಿಣ ದಿಕ್ಕು- ಅತ್ಯಂತ ಶ್ರೇಷ್ಠ ಮತ್ತು ಮಂಗಳಕರ

ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರ ಎರಡರಲ್ಲೂ ದಕ್ಷಿಣ ದಿಕ್ಕಿಗೆ ತಲೆಯಿಟ್ಟು, ಉತ್ತರ ದಿಕ್ಕಿಗೆ ಕಾಲು ಮಾಡಿ ಮಲಗುವುದನ್ನು ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕು ಯಮಧರ್ಮರಾಜ ಮತ್ತು ಪಿತೃಗಳಿಗೆ ಸಂಬಂಧಿಸಿದ್ದಾಗಿದೆ. ಈ ದಿಕ್ಕಿನಲ್ಲಿ ತಲೆಯಿಟ್ಟು ಮಲಗುವುದರಿಂದ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ಹಾಗೂ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ.

ವೈಜ್ಞಾನಿಕವಾಗಿ ಭೂಮಿಯ ಕಾಂತೀಯ ವಲಯವು ಉತ್ತರದ ಕಡೆಗಿರುತ್ತದೆ. ನಾವು ದಕ್ಷಿಣಕ್ಕೆ ತಲೆಯಿಟ್ಟು ಮಲಗಿದಾಗ ನಮ್ಮ ದೇಹದ ಧ್ರುವೀಯತೆ ಮತ್ತು ಭೂಮಿಯ ಕಾಂತೀಯ ಶಕ್ತಿಯ ನಡುವೆ ಸಮತೋಲನ ಏರ್ಪಡುತ್ತದೆ. ಇದರಿಂದ ರಕ್ತ ಪರಿಚಲನೆ ಸರಾಗವಾಗಿ ಸಾಗಿ ಗಾಢವಾದ ನಿದ್ದೆ ಬರುತ್ತದೆ.

ಇದನ್ನೂ ಓದಿ:

ಪೂರ್ವ ದಿಕ್ಕು -ಜ್ಞಾನ ಮತ್ತು ಏಳಿಗೆಯ ಸಂಕೇತ

ಪೂರ್ವ ದಿಕ್ಕಿಗೆ ತಲೆ ಇಟ್ಟು, ಪಶ್ಚಿಮಕ್ಕೆ ಕಾಲು ಮಾಡಿ ಮಲಗುವುದು ಎರಡನೇ ಅತ್ಯುತ್ತಮ ಆಯ್ಕೆಯಾಗಿದೆ. ಶಾಸ್ತ್ರದ ಪ್ರಕಾರ ಪೂರ್ವ ದಿಕ್ಕು ಸೂರ್ಯ ದೇವನಿಗೆ ಸಂಬಂಧಿಸಿದ್ದಾಗಿದೆ. ಈ ದಿಕ್ಕಿನಲ್ಲಿ ಮಲಗುವುದರಿಂದ ನೆನಪಿನ ಶಕ್ತಿ, ಏಕಾಗ್ರತೆ ಮತ್ತು ಧನಾತ್ಮಕ ಆಲೋಚನೆಗಳು ಹೆಚ್ಚುತ್ತವೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಶೋಧಕರು, ಶಿಕ್ಷಕರು ಮತ್ತು ಬುದ್ಧಿಜೀವಿಗಳು ತಮ್ಮ ಬುದ್ಧಿಮತ್ತೆ ಹಾಗೂ ಏಳಿಗೆಗಾಗಿ ಕಡ್ಡಾಯವಾಗಿ ಪೂರ್ವ ದಿಕ್ಕಿಗೆ ತಲೆಯಿಟ್ಟು ಮಲಗಬೇಕು.

ಪಶ್ಚಿಮ ದಿಕ್ಕು – ಮಧ್ಯಮ ಫಲಪ್ರದ

ಪಶ್ಚಿಮ ದಿಕ್ಕಿಗೆ ತಲೆ ಇಟ್ಟು ಮಲಗುವುದನ್ನು ಶಾಸ್ತ್ರದಲ್ಲಿ ಮಧ್ಯಮ ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ತಲೆಯಿಟ್ಟು ಮಲಗುವುದರಿಂದ ಜೀವನದಲ್ಲಿ ಕೆಲವು ಬಾರಿ ಯಶಸ್ಸು ಮತ್ತು ಪ್ರಗತಿ ಸಿಗಬಹುದು. ಆದರೆ, ಆಧ್ಯಾತ್ಮಿಕವಾಗಿ ಅಥವಾ ಮಾನಸಿಕವಾಗಿ ಇದು ಅಷ್ಟು ಪ್ರಶಸ್ತವಲ್ಲ. ಇದು ಕೆಲವು ಬಾರಿ ಮನಸ್ಸಿನಲ್ಲಿ ಅತಿಯಾದ ಆತಂಕ ಅಥವಾ ನಿದ್ದೆಯಲ್ಲಿ ಕೆಟ್ಟ ಕನಸುಗಳು ಬರಲು ಕಾರಣವಾಗಬಹುದು ಎನ್ನಲಾಗುತ್ತದೆ.

ಉತ್ತರ ದಿಕ್ಕು- ಎಂದಿಗೂ ಮಲಗಬಾರದು!

ಜ್ಯೋತಿಷ್ಯ ಮತ್ತು ವಾಸ್ತು ಪ್ರಕಾರ ಉತ್ತರ ದಿಕ್ಕಿಗೆ ತಲೆ ಇಟ್ಟು ಎಂದಿಗೂ ಮಲಗಲೇಬಾರದು. ಹಿಂದೂ ಧರ್ಮದ ಪ್ರಕಾರ ಉತ್ತರ ದಿಕ್ಕಿಗೆ ಕೇವಲ ಮೃತದೇಹದ ತಲೆಯನ್ನು ಮಾತ್ರ ಇಡಲಾಗುತ್ತದೆ.

ವೈಜ್ಞಾನಿಕವಾಗಿ ಉತ್ತರಕ್ಕೆ ತಲೆಯಿಟ್ಟು ಮಲಗಿದಾಗ, ಭೂಮಿಯ ಉತ್ತರ ಧ್ರುವದ ಕಾಂತೀಯ ಶಕ್ತಿಯು ನಮ್ಮ ದೇಹದ ರಕ್ತದಲ್ಲಿರುವ ಕಬ್ಬಿಣದಾಂಶವನ್ನು ತಲೆಯ ಕಡೆಗೆ ಜೋರಾಗಿ ಆಕರ್ಷಿಸುತ್ತದೆ. ಇದರಿಂದ ಮೆದುಳಿನ ಮೇಲಿನ ಒತ್ತಡ ಹೆಚ್ಚಾಗಿ ತಲೆನೋವು, ಆರ್ಥಿಕ ನಷ್ಟ, ಮಾನಸಿಕ ಒತ್ತಡ, ಹೃದಯದ ಸಮಸ್ಯೆಗಳು ಮತ್ತು ನಿದ್ದೆಯಿಲ್ಲದ ಕಾಯಿಲೆ ಆವರಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !