May 31, 2026
Sunday, May 31, 2026
spot_img

ರಾಯದ ದರುಶನಕ್ಕೆ ಹೋಗುತ್ತಿದ್ದ ವಾಹನ ಅಪಘಾತ: ಮೃತರ ಸಂಖ್ಯೆ ಏಳಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಾಸನದಿಂದ ರಾಯರ ದರುಶನಕ್ಕೆ ತೆರಳಿದ್ದ ಕುಟುಂಬವಿದ್ದ ಕಾರು ಅಪಘಾತಕ್ಕೀಡಾಗಿತ್ತು. ಇದೀಗ ಮೃತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.

ಗಂಭೀರವಾಗಿ ಗಾಯಗೊಂಡ 16 ವರ್ಷದ ಬಾಲಕಿ ತೇಜಸ್ವಿನಿ ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇವರು ಬೇಲೂರಿನ ಶೆಟ್ಟಿಗೆರೆ ಗ್ರಾಮದ ನಿವಾಸಿ. ಅಪಘಾತದಲ್ಲಿ ತೇಜಸ್ವಿನಿಯ ತಾಯಿ ಲೋಲಾಕ್ಷಿ ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ. ಇದೀಗ ತೇಜಸ್ವಿನಿಯ ಸಾವಿನಿಂದಾಗಿ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೇರಿದೆ.

ರಾಘವೇಂದ್ರನ ದರುಶನಕ್ಕೆ ಹೊರಟಿದ್ದ ಬೊಲೇರೋ ವಾಹನ ಸಿಮೆಂಟ್‌ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಸ್ಥಳದಲ್ಲಿಯೇ ಆರು ಮಂದಿ ಮೃತಪಟ್ಟಿದ್ದರು. ಇದೀಗ ಮೃತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !