ಛತ್ತೀಸ್‌ಗಡದಲ್ಲಿ ಭೀಕರ ಅಪಘಾತ: 3 ಮಂದಿ ಸಾವು 18 ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮದುವೆ ಮನೆಯಿಂದ ವಾಪಸ್ಸಾಗುತ್ತಿದ್ದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು 3 ಮಂದಿ ಸಾವನ್ನಪ್ಪಿ 18 ಜನರಿಗೆ ಗಾಯವಾದ ಘಟನೆ ಛತ್ತೀಸ್‌ಗಢದ ಧೋಧೋಯ್ ಚೌಕದ ಬಳಿ ನಡೆದಿದೆ.
ಪಂಚದೇವರಿಯಿಂದ ಮದುವೆ ಕಾರ್ಯಕ್ರಮವೊಂದನ್ನು ಮುಗಿಸಿ ವಾಪಸ್ಸಾಗುತ್ತಿದ್ದ ವಾಹನಕ್ಕೆ ಧೋಧೋಯ್‌ ಚೌಕದ ಬಳಿ ಬಿಡಾಡಿದನವೊಂದು ಅಡ್ಡ ಬಂದಿದೆ. ಈ ವೇಳೆ ದನದಿಂದ ತಪ್ಪಿಸಿಕೊಳ್ಳಲು ಚಾಲಕ ವಾಹನವನ್ನು ರಸ್ತೆಯಿಂದ ಕೆಳಕ್ಕೆ ಇಳಿಸಿದ್ದಾನೆ. ಮೊದಲೇ ವಾಹನವು ವೇಗದಲ್ಲಿದ್ದರಿಂದ ನಿಯಂತ್ರಣ ತಪ್ಪಿ ತಲೆಕೆಳಗಾಗಿ ಪಲ್ಟಿಯಾಗಿದೆ. ಇದರ ಪರಿಣಾಮವಾಗಿ ವಾಹನದಲ್ಲಿದ್ದ ಎಲ್ಲಾ ಪ್ರಯಾಣಿಕರು ತೊಂದರೆಗೀಡಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!