October 10, 2026
Saturday, October 10, 2026
spot_img

ಮುಂಬೈಗೆ ಶತಕದ ‘ತಿಲಕ’ ಇಟ್ಟ ವರ್ಮಾ: ಗುಜರಾತ್​ ಗೆಲುವಿಗೆ ಬಿಗ್ ಟಾರ್ಗೆಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಹಮದಾಬಾದ್‌ ಕ್ರೀಡಾಂಗಣದಲ್ಲಿ ಇಂದು ತಿಲಕ್ ವರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಿದ್ದು, ಸಿಕ್ಸರ್, ಬೌಂಡರಿ ಗಳ ಸುರಿಮಳೆಗೆ ಅಮೋಘ ಶತಕ ಸಿಡಿಸಿದರು. ಈ ಮೂಲಕ ಮುಂಬೈ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ, ಗುಜರಾತ್ ಗೆಲುವಿಗೆ ಬಿಗ್ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈಗೆ ಮತ್ತೆ ಕಳಪೆ ಆರಂಭ ಸಿಕ್ಕಿದ್ದು, ಕ್ವಿಂಟನ್ ಡಿ ಕಾಕ್ 13 ರನ್‌ಗಳಿಗೆ ಔಟಾದರು. ಇತ್ತ ಚೊಚ್ಚಲ ಐಪಿಎಲ್ ಪಂದ್ಯವಾಡಿದ ಡ್ಯಾನಿಶ್ ಕೂಡ 2 ರನ್‌ಗಳಿಗೆ ಔಟಾದರು. ಇದರ ಬೆನ್ನಲ್ಲೇ ಸೂರ್ಯಕುಮಾರ್ 15 ರನ್‌ ಗಳಿಸಿ ಪೆವಿಲಿಯನ್ ನತ್ತ ಸಾಗಿದರು.

ಬಳಿಕ ಜೊತೆಯಾದ ತಿಲಕ್ ವರ್ಮಾ ಮತ್ತು ನಮನ್ ಧೀರ್ ಮುಂಬೈ ತಂಡದ ರನ್ ಮೊತ್ತ ಹೆಚ್ಚಿಸಿದರು. ನಮನ್ ಧೀರ್ 45 ರನ್ ಗಳಿಸಿ ಔಟಾದರು. ಒಂದೆಡೆ ಸತತ ವಿಕೆಟ್‌ಗಳು ಉರುಳುತಿದ್ದಂತೆ ಅತ್ತ ತಿಲಕ್ ವರ್ಮಾ ಅಮೋಘ ಬ್ಯಾಟಿಂಗ್ ನಡೆಸಿ ಕೇವಲ 45 ಎಸೆತಗಳಲ್ಲಿ ಶತಕ ಬಾರಿಸಿದರು.

Must Read