October 9, 2026
Friday, October 9, 2026
spot_img

IPL ಸೇರಿದ ಶಾನಕಗೆ ‘ಪಿಎಸ್‌ಎಲ್ ಶಾಕ್’! ಒಂದು ವರ್ಷ ಬ್ಯಾನ್ ಶಿಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಲಂಕಾ ತಂಡದ ಆಲ್‌ರೌಂಡರ್ ದಾಸುನ್ ಶಾನಕ ಐಪಿಎಲ್ ಆಯ್ಕೆ ಮಾಡಿದ ಪರಿಣಾಮ ಇದೀಗ ಪಾಕಿಸ್ತಾನ ಸೂಪರ್ ಲೀಗ್‌ನಿಂದ ಗಂಭೀರ ಶಿಕ್ಷೆ ಎದುರಿಸಿದ್ದಾರೆ. ಒಪ್ಪಂದ ಉಲ್ಲಂಘನೆ ಆರೋಪದಡಿ ಅವರನ್ನು ಮುಂದಿನ ಸೀಸನ್‌ನಿಂದ ನಿಷೇಧಿಸಲಾಗಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ ನೀಡಿರುವ ಮಾಹಿತಿಯ ಪ್ರಕಾರ, 2026ರ ಪಿಎಸ್‌ಎಲ್‌ನಲ್ಲಿ ಲಾಹೋರ್ ತಂಡದ ಭಾಗವಾಗಿದ್ದ ಶಾನಕ, ಮಧ್ಯದಲ್ಲಿ ಟೂರ್ನಿಯನ್ನು ಬಿಟ್ಟು ಹೊರಬಂದಿದ್ದರು. ಈ ನಡೆ ಆಟಗಾರರ ಒಪ್ಪಂದ ನಿಯಮಗಳಿಗೆ ವಿರುದ್ಧವಾಗಿದ್ದು, ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ವರದಿಗಳ ಪ್ರಕಾರ, ಐಪಿಎಲ್‌ನಲ್ಲಿ ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಅವರು ಪಿಎಸ್‌ಎಲ್ ತೊರೆದಿದ್ದರು.

ಇದನ್ನೂ ಓದಿ:

ಶಾನಕ ಅವರ ನಿರ್ಧಾರದ ಹಿಂದೆ ಆರ್ಥಿಕ ಕಾರಣಗಳೂ ಪ್ರಮುಖವೆಂದು ಹೇಳಲಾಗುತ್ತಿದೆ. ಪಿಎಸ್‌ಎಲ್ ಒಪ್ಪಂದಕ್ಕಿಂತ ಐಪಿಎಲ್‌ನಲ್ಲಿ ಹೆಚ್ಚಿನ ಮೊತ್ತ ಸಿಗುವ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಇದೀಗ ನಿಷೇಧದ ಹಿನ್ನೆಲೆ ಶಾನಕ ಕ್ಷಮೆಯಾಚಿಸಿದ್ದು, ತಮ್ಮ ಕ್ರಮದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಅಭಿಮಾನಿಗಳು ಮತ್ತು ಕ್ರಿಕೆಟ್ ಸಮುದಾಯದ ವಿಶ್ವಾಸಕ್ಕೆ ಧಕ್ಕೆಯಾದರೆ ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ.

ಇದೇ ರೀತಿಯ ಪ್ರಕರಣದಲ್ಲಿ ಇತ್ತೀಚೆಗೆ ಮತ್ತೊಬ್ಬ ಆಟಗಾರನಿಗೂ ನಿಷೇಧ ಹೇರಲಾಗಿದ್ದು, ಲೀಗ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಮಂಡಳಿ ಕಠಿಣ ಸಂದೇಶ ನೀಡಿದೆ.

Must Read