ಸಂಗೀತ ವಾದ್ಯಗಳನ್ನು ಸುಟ್ಟು ಹಾಕಿದ ತಾಲಿಬಾನಿಗಳು: ಬಿಕ್ಕಿಬಿಕ್ಕಿ ಅತ್ತ ಸಂಗೀತಗಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನವನ್ನು ತಾಲಿಬಾನ್ ತನ್ನ ವಶಕ್ಕೆ ಪಡೆದ ನಂತರ ಅಲ್ಲಿನ ಜನರ ಪಾಡು ಶೋಚನೀಯವಾಗಿದೆ ಎಂದರೆ ತಪ್ಪಾಗಲಾರದು. ಒಂದಾದ ಮೇಲೊಂದು ವಿಚಾರಗಳಿಗೆ ತಾಲಿಬಾನ್ ತನ್ನದೇ ಆದ ಕಟ್ಟುಪಾಡನ್ನು ರೂಪಿಸುತಿದೆ. ಅದರಲ್ಲಿ ಸಂಗೀತದ ಮೇಲಿನ ನಿರ್ಬಂಧವೂ ಒಂದು.
ಅಫ್ಘಾನ್ ನ ಪಕ್ತೀಯಾ ಪ್ರಾಂತ್ಯದಲ್ಲಿ ಸಂಗೀತಗಾರನ ಎದುರೆ ಆತನ ಸಂಗೀತ ಸಾಧನವನ್ನು ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಇದನ್ನು ಕಣ್ಣಾರೆ ಕಂಡ ಸಂಗೀತಗಾರ ಬಿಕ್ಕಿಬಿಕ್ಕಿ ಅಂತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಅಫ್ಘಾನ್ ನ ಪತ್ರಕರ್ತ ಅಬ್ದುಲ್ ಹಕ್ ಒಮೆರಿ ಹಂಚಿಕೊಂಡಿದ್ದಾರೆ.

ತಾಲಿಬಾನಿಗಳು ಸಂಗೀತಗಾರನ ಸಂಗೀತ ಉಪಕರಣವನ್ನು ಸುಟ್ಟು ಹಾಕಿದ್ದಲ್ಲದೇ, ಆತನ ಎದುರು ಅಣಕಿಸಿ ನಕ್ಕಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮತ್ತೊಬ್ಬ ವ್ಯಕ್ತಿ ಸಂಗೀತಗಾರನ ಪರಿಸ್ಥಿಯನ್ನು ವಿಡಿಯೋ ಮಾಡುತ್ತಿದ್ದದ್ದು ಕಾಣಬಹುದಾಗಿದೆ.
ಇಷ್ಟೇ ಅಲ್ಲ ವಾಹನಗಳಲ್ಲಿ ಸಂಗೀತ ಕೇಳುವುದು, ಮದುವೆ ಮನೆಯಲ್ಲಿ ಸಂಗೀತ ಕೇಳುವುದನ್ನು ಕೂಡ ತಾಲಿಬಾನ್ ಸರ್ಕಾರ ನಿಷೇಧಿಸಿದೆ. ಮದುವೆ ಬರುವ ಪುರುಷರು ಹಾಗೂ ಮಹಿಳೆಯರು ಬೇರೆ ಬೇರೆ ಹಾಲ್ ಗಳಲ್ಲಿ ಇರಬೇಕು ಎನ್ನುವಂತಹ ಕಾನೂನುಗಳನ್ನು ತಾಲಿಬಾನ್ ತಂದಿದೆ ಎಂದು ವರದಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!