Friday, October 7, 2022

Latest Posts

ಸಂಪನ್ನವಾಯಿತು ವಿಯೆಟ್ನಾಂ-ಭಾರತ ಸೇನಾ ವ್ಯಾಯಾಮ: ವಿಶ್ವ ಸಂಸ್ಥೆಯ ಶಾಂತಿಪಾಲನೆಗೆ ಕೊಡುಗೆ ನೀಡಲಿವೆ ಉಭಯ ದೇಶಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತ ಹಾಗೂ ವಿಯೆಟ್ನಾಂ ದೇಶಗಳ ದ್ವಿಪಕ್ಷೀಯ ಸೇನಾ ವ್ಯಾಯಾಮ VINBAX 2022 ಚಂಡಿಮಂದಿರದಲ್ಲಿ ಸಂಪನ್ನವಾಗಿದೆ. ವಿಪತ್ತು ಪರಿಹಾರದಲ್ಲಿ ಮಲ್ಟಿ ಏಜೆನ್ಸಿ ಮಾನವೀಯ ನೆರವು (HADR) ಗುರಿಯೊಂದಿಗೆ ಹಮ್ಮಿಕೊಳ್ಳಲಾಗಿದ್ದ ಈ ಸಮರಾಭ್ಯಾಸದಲ್ಲಿ ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್ ಉಪಕ್ರಮಗಳನ್ನು ಪ್ರದರ್ಶಿಸುವ ಸಾಧನಗಳ ಪ್ರಭಾವ ಶಾಲಿ ಪ್ರದರ್ಶನವೂ ನಡೆದಿದೆ.

ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಸೇನಾ ಇಂಜಿನಿಯರ್ ಮತ್ತು ವೈದ್ಯಕೀಯ ತಂಡಗಳ ನಿಯೋಜನೆಯ ಮೇಲೆ ಈ ಸಮರಾಭ್ಯಾಸವು ಕೇಂದ್ರೀಕೃತವಾಗಿತ್ತು.

ವಿಯೆಟ್ನಾಂ ಪೀಪಲ್ಸ್ ಆರ್ಮಿ (ವಿಪಿಎ)  ವಿದೇಶಿ ಸೈನ್ಯದೊಂದಿಗೆ ಫೀಲ್ಡ್ ಟ್ರೈನಿಂಗ್ ವ್ಯಾಯಾಮವನ್ನು ಕೈಗೊಳ್ಳುತ್ತಿರುವುದು ಇದೇ ಮೊದಲು. ವಿಯೆಟ್ನಾಂ ಭಾರತವನ್ನು ಈ ಸಮರಾಭ್ಯಾಸಕ್ಕೆ ಆಯ್ಕೆ ಮಾಡಿರುವುದು ಉಭಯ ದೇಶಗಳು ತಮ್ಮ ಪರಸ್ಪರ ಸಂಬಂಧದ ಮೇಲೆ ಇಟ್ಟಿರುವ ಮೌಲ್ಯವನ್ನು ಹೇಳುತ್ತದೆ.

ವಿಯೆಟ್ನಾಂ ದಕ್ಷಿಣ ಸುಡಾನ್‌ನಲ್ಲಿ ಮೊದಲ ಬಾರಿಗೆ ಯುಎನ್ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ತುಕಡಿಯನ್ನು ನಿಯೋಜಿಸಿದೆ, ಆದರೆ ಭಾರತವು ಯುಎನ್ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಕೊಡುಗೆ ನೀಡುವ ಶ್ರೀಮಂತ ಸಂಪ್ರದಾಯವನ್ನು ಹೊಂದಿದೆ.

ಸಮಾರೋಪ ಸಮಾರಂಭದಲ್ಲಿ ಭಾರತದಲ್ಲಿನ ವಿಯೆಟ್ನಾಂನ ರಾಯಭಾರಿ ಫಾಮ್ ಸಾನ್ ಚೌ ಮತ್ತು ವಿಯೆಟ್ನಾಂ ಸೇನೆಯ ಉನ್ನತ ಮಟ್ಟದ ವೀಕ್ಷಕ ನಿಯೋಗ ಭಾಗವಹಿಸಿತ್ತು. ಭಾರತದ ಕಡೆಯಿಂದ ಪಶ್ಚಿಮ ಕಮಾಂಡ್‌ ನ ಲೆಫ್ಟಿನೆಂಟ್ ಜನರಲ್ ನವ್ ಕುಮಾರ್ ಖಂಡೂರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಇದನ್ನು ಖಾರ್ಗಾ ಕಾರ್ಪ್ಸ್ ಲೆಫ್ಟಿನೆಂಟ್ ಜನರಲ್ ಪ್ರತೀಕ್ ಶರ್ಮಾ ಆಯೋಜಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು ವಿಯೆಟ್ನಾಂ ಮತ್ತು ಭಾರತದ ನಡುವಿನ ನಿಕಟ ಸಂಬಂಧ ಮತ್ತು ಹಿತಾಸಕ್ತಿಗಳನ್ನು ಒತ್ತಿ ಹೇಳಿದರು. ಹಾಗೂ VINBAX ನ ಮುಂದಿನ ಆವೃತ್ತಿಯನ್ನು 2023 ರಲ್ಲಿ ವಿಯೆಟ್ನಾಂನಲ್ಲಿ ಆಯೋಜಿಸುವ ಕುರಿತು ಚಿಂತನೆ ನಡೆಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!