ಏಕದಿನ ಕ್ರಿಕೆಟ್‌ನಲ್ಲಿ ಮೊದಲ 500 ರನ್‌..! ಚಿನ್ನಸ್ವಾಮಿಯಲ್ಲಿ ಐತಿಹಾಸಿಕ ದಾಖಲೆ ಬರೆದ ತಮಿಳುನಾಡು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತೀಯ ಕ್ರಿಕೆಟ್‌ ಗೆ ಇಂದು ಐತಿಹಾಸಿಕ ದಿನ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಜಯ್‌ ಹಜಾರೆ ಟ್ರೋಫಿ ಏಕದಿನ ಪಂದ್ಯದಲ್ಲಿ ಅರುಣಾಚಲ ಪ್ರದೇಶ ವಿರುದ್ಧ ರನ್‌ ಮಳೆಯನ್ನೇ ಸುರಿಸಿರುವ ತಮಿಳುನಾಡು ತಂಡ ವಿಶ್ವ ಕ್ರಿಟ್‌ ನಲ್ಲಿ ಲೀಸ್ಟ್‌ ಎ ಕ್ರಿಕೆಟ್ ನಲ್ಲಿ 500 ರನ್‌ ಕಲೆಹಾಕಿದ ಮೊಟ್ಟ ಮೊದಲ ತಂಡ ಎಂಬ ಮಹೋನ್ನತ ಸಾಧನೆಗೆ ಪಾತ್ರವಾಗಿದೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ತಮಿಳುನಾಡು ಸೋಮವಾರ ಅರುಣಾಚಲ ಪ್ರದೇಶ ತಂಡವನ್ನು ಎದುರಿಸಿತು. ಆರಂಭದಿಂದಲೇ  ಅಬ್ಬರಿಸಿದ ತಮಿಳುನಾಡು ನಿಗದಿತ 50 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ಕಳೆದುಕೊಂಡು 506 ರನ್‌ ಗಳ ಬಿಗ್‌ ಸ್ಕೋರ್‌ ಕಲೆಹಾಕಿದೆ. ತಮಿಳುನಾಡು ಅಬ್ಬರಕ್ಕೆ ಹಿಂದಿನ ದಾಖಲೆಗಳು ಪತನವಾಗಿವೆ. ಮೊಟ್ಟ ಮೊದಲ ಬಾರಿಗೆ, ಲಿಸ್ಟ್ ಎ ಪಂದ್ಯದಲ್ಲಿ 500 ರನ್‌ ದಾಖಲಾಗಿದೆ. ತಮಿಳುನಾಡಿನ ಈ ಪ್ರದರ್ಶನದ ಮೊದಲು, ನೆದರ್ಲ್ಯಾಂಡ್ಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ 498 ರನ್ ಗಳಿಸಿದ್ದು ಅತಿ ಹೆಚ್ಚು ಲಿಸ್ಟ್ ಎ ಮೊತ್ತವಾಗಿತ್ತು.
ತಮಿಳುನಾಡು ಪರ ಅಬ್ಬರಿಸಿದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ ಮನ್ ನಾರಾಯಣ್ ಜಗದೀಶನ್ 25 ಬೌಂಡರಿಗಳು ಮತ್ತು 15 ಸಿಕ್ಸರ್‌ಗಳ ನೆರವಿನಿಂದ ಬರೋಬ್ಬರಿ 277 ರನ್ ಸಿಡಿಸಿದರು. ಈ ಮೂಲಕ ಜಗದೀಸನ್ 2002 ರಲ್ಲಿ ಗ್ಲಾಮೊರ್ಗಾನ್ ವಿರುದ್ಧ ಓವಲ್‌ನಲ್ಲಿ 268 ರನ್ ಗಳಿಸಿದ್ದ ಸರ್ರೆಯ ಅಲೆಕ್ಸ್ ಬ್ರೌನ್ ಅವರ ದಾಖಲೆಯನ್ನು ಅಳಿಸಿಹಾಕಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಜಗದೀಶನ್ ಮತ್ತು ಸಾಯಿ ಸುದರ್ಶನ್ ಕೇವಲ 38.3 ಓವರ್‌ಗಳಲ್ಲಿ 416 ರನ್‌ಗಳ ಆರಂಭಿಕ ಜೊತೆಯಾಟವನ್ನು ನೀಡಿದ್ದಾರೆ. ಮತ್ತು ಇದು ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗಿನ ಅತ್ಯಧಿಕ ಜೊತೆಯಾಟವಾಗಿದೆ. ಸುದರ್ಶನ್ ಕೇವಲ 102 ಎಸೆತಗಳಲ್ಲಿ 19 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 154 ರನ್ ಗಳಿಸಿ ಔಟಾದರು. ಈ ಬಾರಿ ಮೊತ್ತ ಬೆನ್ನತ್ತಿದ ಅರುಣಾಚಲ ಪ್ರದೇಶ 19 ರನ್‌ ಗೆ 2 ವಿಮಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!