ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿ ಜೋಸೆಫ್ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭ ರಾಜಕೀಯವಾಗಿ ಭಾರೀ ಗಮನ ಸೆಳೆದಿದ್ದರೆ, ಮತ್ತೊಂದೆಡೆ ಅವರ ಕುಟುಂಬದ ಗೈರುಹಾಜರಾತಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಮಹತ್ವದ ಕ್ಷಣದಲ್ಲಿ ಕುಟುಂಬದ ಸದಸ್ಯರು ಕಾಣಿಸದಿರುವುದು ಹಲವರ ಗಮನ ಸೆಳೆದಿದೆ.
ಸಮಾರಂಭದಲ್ಲಿ ವಿಜಯ್ ಅವರ ಪೋಷಕರು, ಆಪ್ತರು ಹಾಗೂ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿದ್ದರು. ನಟಿ ತ್ರಿಷಾ ಕೃಷ್ಣನ್ ಸೇರಿದಂತೆ ಹಲವು ಪರಿಚಿತ ಮುಖಗಳು ವೇದಿಕೆ ಸಮೀಪ ಕಾಣಿಸಿಕೊಂಡಿದ್ದು, ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದಿತು. ಆದರೆ ವಿಜಯ್ ಅವರ ಪತ್ನಿ ಸಂಗೀತಾ ಮತ್ತು ಮಕ್ಕಳು ಉಪಸ್ಥಿತರಿರದಿರುವುದು ಕುತೂಹಲ ಮೂಡಿಸಿತು.
ಇದನ್ನೂ ಓದಿ:
ಈ ಬೆಳವಣಿಗೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕುಟುಂಬದ ಗೈರುಹಾಜರಾತಿಗೆ ವೈಯಕ್ತಿಕ ಕಾರಣಗಳಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟರೆ, ಇಂತಹ ವಿಶೇಷ ಕ್ಷಣದಲ್ಲಿ ಕುಟುಂಬ ಜೊತೆಯಲ್ಲಿದ್ದರೆ ಮತ್ತಷ್ಟು ಸಂತೋಷಕರವಾಗಿರುತ್ತಿತ್ತು ಎಂಬ ಮಾತುಗಳೂ ಕೇಳಿಬಂದಿವೆ.
ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿ ಜೋಸೆಫ್ ವಿಜಯ್ ಅಥವಾ ಅವರ ಕುಟುಂಬದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳಿಗೆ ಸ್ಪಷ್ಟತೆ ಸಿಕ್ಕಿಲ್ಲ.



