ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಯ್ಕಾಟ್ ಗಳ ಬಿಸಿಯಿಂದ ಬಾಲಿವುಡ್ ನ ಸ್ಥಿತಿ ಡೋಲಾಯಮಾನವಾಗುತ್ತಿದೆ ಎಂಬೆಲ್ಲ ಸುದ್ದಿಗಳ ನಡುವೆ ಪುಷ್ಕರ್-ಗಾಯತ್ರಿ ಅವರ ಆಕ್ಷನ್-ಥ್ರಿಲ್ಲರ್ ವಿಕ್ರಮ್ ವೇದದ ಟೀಸರ್ ಅನ್ನು ಬುಧವಾರ ಬೆಳಿಗ್ಗೆ ಆಗಸ್ಟ್ 24 ರಂದು ಆನ್ಲೈನ್ನಲ್ಲಿ ಬಿಡುಗಡೆ ಮಾಡಲಾಗಿದೆ. ಸೇತುಪತಿಯ ಪಾತ್ರದಲ್ಲಿ ಹೃತಿಕ್ ರೋಶನ್ ಕಾಣಿಸಿಕೊಂಡಿದ್ದರೆ ಮಾಧವನ್ ಪಾತ್ರವನ್ನು ಸೈಫ್ ನಿಭಾಯಿಸಿರುವುದು ಟೀಸರ್ನಲ್ಲಿ ಬಹಿರಂಗವಾಗಿದೆ. ಟೀಸರ್ನಲ್ಲಿರುವ ಆಕ್ಷನ್ ಪ್ಯಾಕ್ಡ್ ದೃಶ್ಯಗಳು ಪ್ರೇಕ್ಷಕರಿಗೆ ಗೂಸ್ ಬಂಬ್ಸ್ ನೀಡುವಂತಿದೆ. ಅಗ್ನಿಪಥ್ ನಂತರ ಮಾಸ್ ಪಾತ್ರದಲ್ಲಿ ಹೃತಿಕ್ ಸಖತ್ ಆಗಿ ಮಿಂಚಿದ್ದರೆ ಗನ್ ಹಿಡಿದ ಸೈಫ್ ಅವರ ಖದರ್ ಗೆ ಪ್ರೇಕ್ಷಕರು ಮೆಚ್ಚುಗೆಯ ಟ್ವೀಟ್ ಮಾಡಿದ್ದಾರೆ.
ಟ್ವೀಟರ್ ನಲ್ಲಿ ಮೆಚ್ಚುಗೆಯ ಸುರಿಮಳೆ
ವಿಕ್ರಮ್ ವೇದಾ ಟೀಸರ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿಶೇಷವಾಗಿ ಹೃತಿಕ್ ರೋಷನ್ ಮತ್ತು ಸೈಫ್ ಅವರ ಆಕ್ಷನ್, ರಕ್ತಪಾತ ಮತ್ತು ಡೈಲಾಗ್ಗಳನ್ನು ಅಭಿಮಾನಿಗಳು ಪ್ರೀತಿಸುತ್ತಿದ್ದಾರೆ. ಟ್ವಿಟರ್ನಲ್ಲಿ ಟೀಸರ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಹೃತಿಕ್ ಗೂ ಎಚ್ಚರಿಸಿತ್ತು ಬಾಯ್ಕಾಟ್ ಬಿಸಿ
ಬಾಯ್ಕಾಟ್ ಬಿಸಿ ಹೃತಿಕ್ ರೋಷನ್ ಅವರಿಗೂ ಬಿಸಿ ಮುಟ್ಟಿಸಿತ್ತು. ಲಾಲ್ ಸಿಂಗ್ ಚಡ್ಡಾವನ್ನು ನೋಡುವಂತೆ ಹೃತಿಕ್ ಹೇಳಿದ್ದರು. ಆದರೆ ಇದನ್ನು ವಿರೋಧಿಸಿದ ಟ್ವೀಟಿಗರು ನಿಮ್ಮ ವಿಕ್ರಂ ವೇದಾ ಕೂಡ ಸದ್ಯದಲ್ಲೇ ಬರಲಿದೆ ಎಂದು ಎಚ್ಚರಿಸಿದ್ದರು. ಹೃತಿಕ್ ಈ ಕುರಿತು ಹೆಚ್ಚಿನದಾಗೇನೂ ಪ್ರತಿಕ್ರಿಯೆ ನೀಡಿರಲಿಲ್ಲ.
एक कहानी सुनाएँ? #VikramVedhaTeaser OUT NOW https://t.co/mqDWKIGq8T#VikramVedha releasing in cinemas worldwide on 30th September 2022.#SaifAliKhan @PushkarGayatri pic.twitter.com/DeIj6qMfC4
— Hrithik Roshan (@iHrithik) August 24, 2022
ವಿಕ್ರಮ್ ವೇದವನ್ನು ಗುಲ್ಶನ್ ಕುಮಾರ್, ಟಿ-ಸೀರೀಸ್ ಮತ್ತು ರಿಲಯನ್ಸ್ ಎಂಟರ್ಟೈನ್ಮೆಂಟ್, ಫ್ರೈಡೇ ಫಿಲ್ಮ್ವರ್ಕ್ಸ್ ಮತ್ತು ಜಿಯೋ ಸ್ಟುಡಿಯೋಸ್ ಮತ್ತು YNOT ಸ್ಟುಡಿಯೋಸ್ ನಿರ್ಮಾಣದ ಸಹಯೋಗದೊಂದಿಗೆ ಪ್ರಸ್ತುತಪಡಿಸಲಾಗಿದೆ. ಚಿತ್ರವನ್ನು ಪುಷ್ಕರ್ ಮತ್ತು ಗಾಯತ್ರಿ ನಿರ್ದೇಶಿಸಿದ್ದಾರೆ ಮತ್ತು ಭೂಷಣ್ ಕುಮಾರ್ ಮತ್ತು ಎಸ್. ಶಶಿಕಾಂತ್ ನಿರ್ಮಿಸಿದ್ದಾರೆ. ಸೆಪ್ಟೆಂಬರ್ 30, 2022 ರಂದು ವಿಕ್ರಮ್ ವೇದ ಜಾಗತಿಕವಾಗಿ ದೊಡ್ಡ ಪರದೆಯ ಮೇಲೆ ಬರಲಿದೆ.