Sunday, December 3, 2023

Latest Posts

ಕಿಚ್ಚ ಅಭಿಮಾನಿಗಳಿಗೆ ಖುಷಿ: ‘ವಿಕ್ರಾಂತ್‌ ರೋಣ’ ಸಿನಿಮಾದ ರುಕ್ಕಮ್ಮ ಸಾಂಗ್ ರಿಲೀಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ನಟ ಕಿಚ್ಚ ಸುದೀಪ್‌ ಅಭಿನಯದ ಬಹು ನಿರೀಕ್ಷಿತ ‘ವಿಕ್ರಾಂತ್‌ ರೋಣ’ ಸಿನಿಮಾದ ‘ಗಡಾಂಗ್ ರುಕ್ಕಮ್ಮ’ ಲಿರಿಕಲ್ ಹಾಡು ಬಿಡುಗಡೆ ಆಗಿದ್ದು, ಸಖತ್ತಾಗಿರುವ ಲಿರಿಕ್ಸ್​ಗೆ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಕಿಚ್ಚ ಸುದೀಪ್ ಹೆಜ್ಜೆ ಹಾಕಿದ್ದು, ಯುಟೂಬ್​ನಲ್ಲಿ ಹೊಸ ದಾಖಲೆ ನಿರ್ಮಿಸಲು ಸಜ್ಜಾಗಿದೆ.
ಸದ್ಯ ಇಂದು ಕನ್ನಡದ ಲಿರಿಕಲ್ ಸಾಂಗ್ ಮಾತ್ರ ರಿಲೀಸ್ ಆಗಿದ್ದು, ದಿನಕ್ಕೊಂದು ಭಾಷೆಯಲ್ಲಿ ಲಿರಿಕ್ಸ್ ಬಿಡುಗಡೆ ಮಾಡಲು ಟೀಂ ನಿರ್ಧರಿಸಿದೆ. ನಾಳೆ ಹಿಂದಿ, ಮೇ.25 ರಂದು ತೆಲುಗು, ಮೇ26ಕ್ಕೆ ತಮಿಳು ಹಾಗೂ 27ರಂದು ಮಲಯಾಳಂನಲ್ಲಿ ಹಾಡು ಯೂಟೂಬ್​ನಲ್ಲಿ ಕಾಣಿಸಿಕೊಳ್ಳಲಿದೆ.

ಹಾಡಿಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದು, ಪ್ರೇಕ್ಷಕರಿಗೆ ರಸದೌತಣ ಸಿಗುವ ಎಲ್ಲ ಲಕ್ಷಣಗಳು ಲಿರಿಕಲ್ ವಿಡಿಯೋದಲ್ಲಿ ಕಾಣಿಸುತ್ತಿವೆ. ಚಿತ್ರ ನಿರ್ದೇಶಕ ಅನೂಪ್ ಭಂಡಾರಿ ಅವರೇ ಕ್ಯಾಚಿ ಸಾಹಿತ್ಯ ರಚಿಸಿದ್ದು, ಅಜನೀಶ್ ಲೋಕನಾಥ್ ಉತ್ತಮ ಸಂಗೀತ ನೀಡಿದ್ದಾರೆ. ಜುಲೈ 28ರಂದು ಏಕಕಾಲಕ್ಕೆ ಪ್ರಪಂಚದಾದ್ಯಂತ ಸಿನಿಮಾ ತೆರೆಗೆ ಬರುತ್ತಿದೆ. ಇನ್ನು ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರ ಬ್ಯಾನರ್ ವಿಕ್ರಾಂತ್ ರೋಣಕ್ಕೆ ಸಾಥ್ ನೀಡಿದೆ.
3Dಯಲ್ಲೂ ತೆರೆಗೆ ಬರುತ್ತಿರುವ ವಿಕ್ರಾಂತ್ ರೋಣ ಸಸ್ಪೆನ್ಸ್ ಥ್ರಿಲರ್ ಕಥೆಯಾಗಿದ್ದು, ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!