ಮುಂಬೈ ಇಂಡಿಯನ್ಸ್ ಎಮಿರೈಟ್ಸ್ ಬೌಲಿಂಗ್ ಕೋಚ್ ಆಗಿ ವಿನಯ್ ಕುಮಾರ್ ನೇಮಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಈಗಾಗಲೇ ಮುಂಬೈ ಇಂಡಿಯನ್ಸ್ ಮುಂದಿನ ಐಪಿಎಲ್ ಗೆ ಸಜ್ಜಾಗುತ್ತಿದ್ದು, ಕೋಚಿಂಗ್ ಸ್ಟಾಫ್‌ಗಳ ನೇಮಕ ಮಾಡುತ್ತಿದೆ. ಇದರ ಜೊತೆಗೆ ಗ್ಲೋಬಲ್ ಕ್ರಿಕೆಟ್‌ನಲ್ಲಿ ಹೊಸ ಛಾಪು ಮೂಡಿಸಲು ಸಜ್ಜಾಗಿರುವ ಮುಂಬೈ ಇಂಡಿಯನ್ಸ್ ದುಬೈ ಲೀಗ್ ಹಾಗೂ ಸೌತ್ ಆಫ್ರಿಕಾ ಲೀಗ್ ಟೂರ್ನಿಗಳಲ್ಲಿ ತಂಡ ಖರೀದಿಸಿದೆ. ಮುಂಬೈ ಇಂಡಿಯನ್ಸ್ ಕೇಪ್‌ಟೌನ್ ತಂಡಕ್ಕೆ ಈಗಾಗಲೇ ಕೋಚಿಂಗ್ ಸ್ಟಾಫ್ ನೇಮಕ ಮಾಡಿದೆ.
ಇದೀಗ ಮುಂಬೈ ಇಂಡಿಯನ್ಸ್ ಎಮಿರೈಟ್ಸ್ ತಂಡಕ್ಕೆ ಕೋಚಿಂಗ್ ಸ್ಟಾಫ್ ನೇಮಕ ಮಾಡಲಾಗಿದೆ. ಕನ್ನಡಿಗ, ಟೀಂ ಇಂಡಿಯಾ ಮಾಜಿ ವೇಗಿ ವಿನಯ್ ಕುಮಾರ್‌ಗೆ ಮಹತ್ತರ ಜವಾಬ್ದಾರಿ ನೀಡಲಾಗಿದೆ. ಶೇನ್ ಬಾಂಡ್ ಅವರು ಮುಂಬೈ ಇಂಡಿಯನ್ಸ್‌ನ ಬೌಲಿಂಗ್ ಕೋಚ್‌ನ ಪ್ರಸ್ತುತ ಹುದ್ದೆಯ ಜೊತೆಗೆ ಎಂಐ ಎಮಿರೇಟ್ಸ್‌ಗೆ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಕೋಚಿಂಗ್ ತಂಡದಲ್ಲಿ ಪ್ರಸ್ತುತ ಮುಂಬೈ ಇಂಡಿಯನ್ಸ್ ಟ್ಯಾಲೆಂಟ್ ಸ್ಕೌಟ್ಸ್, ಪಾರ್ಥಿವ್ ಪಟೇಲ್ ಮತ್ತು ವಿನಯ್ ಕುಮಾರ್ ಅವರು ತರಬೇತುದಾರರಾಗಿ ಪಾದಾರ್ಪಣೆ ಮಾಡಲಿದ್ದಾರೆ.
ಪಾರ್ಥಿವ್ ಪಟೇಲ್ ಬ್ಯಾಟಿಂಗ್ ಕೋಚ್ ಆಗಿ, ವಿನಯ್ ಕುಮಾರ್ ಬೌಲಿಂಗ್ ಕೋಚ್ ಮತ್ತು ಮಾಜಿ ಎಂಐ ಆಲ್ ರೌಂಡರ್ ಜೇಮ್ಸ್ ಫ್ರಾಂಕ್ಲಿನ್ ಫೀಲ್ಡಿಂಗ್ ಕೋಚ್ ಆಗಿ ನೇಮಕಕೊಂಡಿದ್ದಾರೆ.
ಇದರ ಜೊತೆಗೆ, ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್‌ನಲ್ಲಿ ಅಪಾರ ಅನುಭವ ಹೊಂದಿರುವ ರಾಬಿನ್ ಸಿಂಗ್, ಎಂಐ ಎಮಿರೇಟ್ಸ್‌ನ ಜನರಲ್ ಮ್ಯಾನೇಜರ್ ಆಗಿ ಬಡ್ತಿ ಹೊಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!