ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನ ಸೂರತ್‌ನಲ್ಲಿರುವ ಕೆಮಿಕಲ್ ಫ್ಯಾಕ್ಟರಿ ಬಳಿ ಅನಿಲ ಸೋರಿಕೆಯಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆ.
ಅನಿಲ ಸೋರಿಕೆಯಿಂದ 22 ಮಂದಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋರಿಕೆಯಾದ ಟ್ಯಾಂಕರ್‌ನಲ್ಲಿ ಜೆರ್ರಿ ಕೆಮಿಕಲ್ ತುಂಬಿತ್ತು ಎನ್ನಲಾಗಿದೆ. ಸಚಿನ್ ಜಿಐಡಿಸಿ ಪ್ರದೇಶದಲ್ಲಿರುವ ರಾಜಕಮಲ್ ಚಿಕ್ಕಡಿ ಫ್ಲಾಟ್‌ನಿಂದ ಕೇವಲ 10 ಮೀಟರ್ ದೂರದಲ್ಲಿ ಟ್ಯಾಂಕರ್ ನಿಂತಿತ್ತು. ಟ್ಯಾಂಕರ್ ಸಮೀಪದಲ್ಲೇ ಕಾರ್ಮಿಕರು ನಿದ್ರಿಸುತ್ತಿದ್ದರು. ಈ ವೇಳೆ ಅನಿಲ ಸೋರಿಕೆಯಾಗಿ ಮಲಗಿದ್ದವರಿಗೆ ಉಸಿರುಗಟ್ಟಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.